Monday, December 23, 2024

ಅದೃಷ್ಟ ಅಂದ್ರೆ ಇದು..! ಟೊಮೆಟೊ ಬೆಳೆದು ‘ಕೋಟ್ಯಾಧಿಪತಿ’ಯಾದ ರೈತ

ಬೆಳಗಾವಿ : ಟೊಮೆಟೊ ಬೆಳೆದು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ನನದಿ ಗ್ರಾಮದ ರೈತನೊಬ್ಬ ಕೋಟಿ ರೂಪಾಯಿ ಸಂಪಾದಿಸಿ ಕೋಟ್ಯಾಧಿಪತಿ ಆಗಿದ್ದಾನೆ.

ನನದಿ ಗ್ರಾಮದಲ್ಲಿ 7 ಎಕರೆ ಜಮೀನು ಲೀಸ್ ಮೇಲೆ ಪಡೆದಿದ್ದ ಮಹಾರಾಷ್ಟ್ರದ ಜಯಸಿಂಗಾಪುರದ ಸಾಗರ್ ಎಂಬ ರೈತ, 5 ಕಟಾವುಗಳಲ್ಲಿ ಒಂದು ಕೋಟಿ ರೂ. ಸಂಪಾದಿಸಿದ್ದಾನೆ.

ಕಳೆದ 30 ವರ್ಷಗಳಿಂದ ಸಾಗರ್ ಕುಟುಂಬಸ್ಥರು ಟೊಮ್ಯಾಟೊ ಬೆಳೆಯುತ್ತಿದ್ದು, ಇದೇ ಮೊದಲ ಬಾರಿಗೆ ಇಷ್ಟೊಂದು ಲಾಭಗಳಿಸಿದ್ದೇವೆ. 7 ಎಕರೆಗೆ 20 ಲಕ್ಷ ಖರ್ಚು ಮಾಡಿದ್ದು, ಇದೀಗ 80ಲಕ್ಷ ಲಾಭಗಳಿಸಿದ್ದೇವೆ. ಇನ್ನು, ಉಳಿದ 5 ಟೊಮೊಟೊ ಕಟಾವಿನ ಬಳಿಕ ಒಂದೂವರೆ ಕೋಟಿ ಲಾಭದ ನಿರೀಕ್ಷೆಯಿದೆ ಎಂದು ರೈತ ಸಂತಸ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES