Wednesday, January 22, 2025

ದಿನೇಶ್ ಗುಂಡೂರಾವ್ ಊಸರವಳ್ಳಿ : ಮುಖ್ಯಮಂತ್ರಿ ಚಂದ್ರು

ಬೆಂಗಳೂರು : ಮೊಹಲ್ಲಾ ಕ್ಲಿನಿಕ್​ಗೆ ಭೇಟಿ ನೀಡಿದ ಬಳಿಕ ದಿನೇಶ್ ಗುಂಡೂರಾವ್ ದ್ವಂದ್ವ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಎಎಪಿ ಅಧ್ಯಕ್ಷ ಮುಖ್ಯಮಂತ್ರಿ‌ ಚಂದ್ರು ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನೇಶ್ ಗುಂಡೂರಾವ್ ಅವರು ಮೊಹಲ್ಲಾ ಕ್ಲಿನಿಕ್​ಗೆ ಭೇಟಿ ನೀಡಿದ್ದರು. ಆನಂತರ ಚೆನ್ನಾಗಿದೆ ಅಂತ ಹೇಳಿದ್ರು. ಆದ್ರೆ, ಹೊರಗೆ ಬಂದು ದಿನೇಶ್ ಗುಂಡೂರಾವ್ ಅವರು ಊಸರವಳ್ಳಿ ನೀತಿ ಅನುಸರಿಸಿದ್ದಾರೆ ಎಂದು ಹೇಳಿದ್ದಾರೆ.

ನಿಮಗೆ ಕಾಮಲೆ ರೋಗ ಇದೆ ಅಂತ ಗೊತ್ತಿರಲಿಲ್ಲ. ಮೊದಲೇ ಗೊತ್ತಿದ್ರೆ ಅಲ್ಲೇ ಚಿಕಿತ್ಸೆ ‌ಕೊಡಿಸಬಹುದಿತ್ತು. ಅವರು ಅಲ್ಲಿಂದ ಆಚೆ ಬಂದ ಮೇಲೆ ಒಂದು ಫೋನ್ ಬಂತು. ಅದಾದ ಮೇಲೆ ಸರಿಯಿಲ್ಲ. ವೈಭವೀಕರಣ ಮಾಡಿದ್ದಾರೆ. ನೀವು ಹೊಗಳಿದ್ದು ಬಿಜೆಪಿಯನ್ನು. ನಿಮಗೆ ಯಾರು ಕಾಲ್ ಮಾಡಿದ್ರು? ಜಾತ್ಯತೀತ ಶಕ್ತಿಗಳು ಒಂದಾಗಿದ್ರೂ ಇವರು ಈ ರೀತಿ ಹೇಳಿಕೆ ನೀಡುತ್ತಿರೋದು ವಿಷಾದನೀಯ ಎಂದು ಕುಟುಕಿದ್ದಾರೆ.

ಪರಿಹಾರದ ಚೆಕ್ ಹಸ್ತಾಂತರ

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಚಿತ್ರದುರ್ಗ ಜಿಲ್ಲೆಯ ಕವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರು ಕುಡಿದು ಸಾವನ್ನಪ್ಪಿದವರ ಮನೆಗೆ ಇಂದು ಭೇಟಿ ನೀಡಿ, ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಇದೇ ವೇಳೆ ಮೃತರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೀಡುವ ಪರಿಹಾರದ ಚೆಕ್ ಅನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್, ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಬಿ.ಎನ್ ಚಂದ್ರಪ್ಪ, ಮಾಜಿ ಸಚಿವರಾದ ಹೆಚ್. ಆಂಜನೇಯ, ಸ್ಥಳೀಯ ಮುಖಂಡರು ಇದ್ದರು.

RELATED ARTICLES

Related Articles

TRENDING ARTICLES