Wednesday, January 22, 2025

ಪೆನ್​ಡ್ರೈವ್ ಹೊರಗೆ ಬರೋದನ್ನೇ ಕಾಯ್ತಿದ್ದೇವೆ : ಸಚಿವ ತಿಮ್ಮಾಪೂರ

ಬಾಗಲಕೋಟೆ : ಮಾಜಿ ಮುಖ್ಯಮಂತ್ರಿ ಹೆಚ್​​.ಡಿ. ಕುಮಾರಸ್ವಾಮಿ ಪೆನ್ ಡ್ರೈವ್ ಹೇಳಿಕೆ ವಿಚಾರಕ್ಕೆ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಪ್ರತಿಕ್ರಿಯಿಸಿದ್ದಾರೆ.

ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್​​.ಡಿ ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡಾಗ, ಕಡಿಮೆ ಸೀಟು ಬಂದಾಗ ಹೀಗೆ ಹೇಳ್ತಾರೆ. ಅವರು ಇನ್ನು ಸುಧಾರಿಸಿಕೊಂಡಿಲ್ಲ ಸುಧಾರಿಸಿಕೊಳ್ಳಬೇಕು ಎಂದು ಚಾಟಿ ಬೀಸಿದ್ದಾರೆ.

ವೈಎಸ್​ಟಿ (YST) ರೂಪದಲ್ಲಿ ವಸೂಲಿ ದಂಧೆ ಎಂಬ ಕುಮಾರಸ್ವಾಮಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿಗೆ ಯಾವ ಮೂಲದಿಂದ ಮಾಹಿತಿ ಸಿಕ್ಕಿದಿಯೋ ಗೊತ್ತಿಲ್ಲ. ನಮ್ಮಲ್ಲಿ ಆ ರೀತಿ ಏನು ಇಲ್ಲ, ಅವರಿಗೆ ಯಾರ ಹೇಳಿದ್ದಾರೆ ಹೇಳಲಿ ನೋಡೋಣ ಎಂದು ಹೇಳಿದ್ದಾರೆ.

ಹಿಟ್ ಆ್ಯಂಡ್ ರನ್ ಮಾಡ್ತಾರೆ

ಅಧಿಕಾರ ಕಳೆದುಕೊಂಡಾಗ ಇಂತಹ ಊಹಾಪೋಹಗಳನ್ನು, ಕಡಿಮೆ ಶಾಸಕರು ಗೆದ್ದಾಗ ಈ ರೀತಿ ಆರೋಪಿಸ್ತಾರೆ. ಹೆಚ್. ಡಿ. ಕುಮಾರಸ್ವಾಮಿ ಹಿಟ್ ಆ್ಯಂಡ್ ರನ್ ಮಾಡ್ತಾರೆ ಅಂತ ಎಲ್ಲರೂ ಹೇಳ್ತಾರೆ. ಪೆನ್​​​​ಡ್ರೈವ್ ತೋರಿಸಿದ್ರು. ಅದು ಯಾವಾಗ ಹೊರಗೆ ಬರುತ್ತೆ ಎಂದು ನಾವು ಕಾಯ್ತಿದ್ದೇವೆ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES