ಬೆಂಗಳೂರು : ಪೊಲೀಸ್ ಸಭೆಯಲ್ಲಿ ವೈಎಸ್ಟಿ (YST) ಭಾಗಿಯಾಗಿದ್ದಾರೆಂಬ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಹೇಳಿದ್ದಕ್ಕೆಲ್ಲಾ ಉತ್ತರ ಕೊಡಲು ಸಾಧ್ಯವಿಲ್ಲ. ಎಲ್ಲವನ್ನೂ ಕ್ರಿಟಿಸೈಸ್ ಮಾಡೋದು ಸರಿಯಲ್ಲ. ಪಾಸಿಟಿವ್ ಸಲಹೆ ಕೊಡೋದಿದ್ರೆ ಕೊಡಲಿ, ಎಲ್ಲದಕ್ಕೂ ಆರೋಪ ಮಾಡೋದು ಸರಿಯಲ್ಲ ಎಂದು ಹೇಳಿದ್ದಾರೆ.
ಎಸ್ಸಿಎಸ್ಪಿ(SCSP), ಟಿಎಸ್ಪಿ(TSP) ಹಣ ದುರ್ಬಳಕೆ ವಿಚಾರವಾಗಿ ಬಿಜೆಪಿ ಪ್ರತಿಭಟನೆ ಕುರಿತು ಮಾತನಾಡಿದ ಅವರು, ಅವರು ಹೇಳಿರೋದ್ರಲ್ಲಿ ಸತ್ಯಾಂಶ ಇಲ್ಲ. ಎಸ್ಸಿಎಸ್ಪಿ(SCSP), ಟಿಎಸ್ಪಿ(TSP)ಗೆ ಬಜೆಟ್‌ನಲ್ಲಿ ಹಣ ಇಟ್ಟಿರೋರು ನಾವು. ಅದರ ಅಡಿಯಲ್ಲಿ ಹಣ ಖರ್ಚು ಮಾಡಬೇಕು. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಹಣ ಖರ್ಚು ಮಾಡಿದ್ರಾ ಅಂತ ನೋಡಬೇಕು. ಈ ಹಣ, ಬಡವರಿಗೆ ಹೋಗ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಗ್ಯಾರಂಟಿಗಳ ಹೆಸರಲ್ಲಿ ಹೂ ಕುಂಡವನ್ನೇ ಇಟ್ಟಿದ್ದೀರಿ : ಕುಮಾರಸ್ವಾಮಿ
ಬಡವರ ಪರ ಕೆಲಸ ಮಾಡ್ತಿದ್ದೇವೆ
ಅಕ್ಕಿ, ವಿದ್ಯುತ್, ಮಹಿಳೆಯರಿಗೆ ಕೊಡೋದ್ರಲ್ಲಿ SC, ST ಜನ ಹೆಚ್ಚು ಇದ್ದಾರೆ. ಅಂದ್ರೆ ಬಡವರು ಹೆಚ್ಚಿದ್ದು, ಎಂಪವರ್ ಮಾಡಲು ಈ ಹಣ ಕೊಡ್ತಿದ್ದೇವೆ. ಅದರಲ್ಲಿ ತಪ್ಪೇನು ಇದೆ? ಅವರು 30 ಸಾವಿರ ಕೊಡುವ ಕಡೆ 25 ಸಾವಿರ ಕೊಟ್ರು. ಡೀಮ್ಡ್ ಎಕ್ಸ್‌ಪೆಂಡೀಚರ್ ಅಂತ ಇದೇ ಹಣ ಖರ್ಚು ಮಾಡಿದ್ರು. ಈಗ ನಮ್ಮ ಸರ್ಕಾರ ಬಂದ ಮೇಲೆ ಬಡ ಜನರನ್ನು ಮೇಲೆತ್ತುವ ಕೆಲಸ ಮಾಡ್ತಿದ್ದೇವೆ. ಆದ್ರೆ ಅವರು ಸಹಿಸುತ್ತಿಲ್ಲ, ಅವರ ಅಜೆಂಡಾನೇ ಬೇರೆ. ನಾವು ಬಡವರ ಪರ ಕೆಲಸ ಮಾಡ್ತಿದ್ದೇವೆ ಎಂದು ಪರಮೇಶ್ವರ್ ಹೇಳಿದ್ದಾರೆ.