Wednesday, January 22, 2025

ಮಾನವೀಯತೆ ಮೆರೆದ KSRTC ನಿರ್ವಾಹಕಿ

ಬಾಗಲಕೋಟೆ : ಲಾರಿಗೆ ಬೆಂಕಿ ತಗುಲಿದ್ದು ಸಂಭವಿಸಬಹುದಾಗಿದ್ದ ದೊಡ್ಢ ಅನಾಹುತ ತಪ್ಪಿಸಿದ ಕೆ.ಎಸ್.ಆರ್.ಟಿ,ಸಿ ನಿರ್ವಾಹಕಿ. ಘಟನೆ ಜಿಲ್ಲೆಯ ಹುನಗುಂದ ಹೊರವಲಯದಲ್ಲಿ ನಡೆದಿದೆ.

ಬಾಗಲಕೋಟೆಯಿಂದ ಜಲ್ಲಿ ತುಂಬಿಕೊಂಡು ತೋರಣಗಲ್ ಕಡೆಗೆ ಹೊರಟಿದ್ದ ಲಾರಿ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅದೇ ವೇಳೆ ಬಸ್​ನಲ್ಲಿ ಬರುತ್ತಿದ್ದ ಶಹಾಪುರ-ಇಳಕಲ್‌ ಕೆ.ಎಸ್.ಆರ್.ಟಿ.ಸಿ ಬಸ್ ನಿರ್ವಾಹಕಿ ಶರಣಮ್ಮ. ಲಾರಿಗೆ ಬೆಂಕಿ ತಗುಲಿದ್ದನ್ನು ಗಮನಿಸಿದ ಶರಣಮ್ಮ ಅವಘಡದಿಂದ ಚಾಲಕನನ್ನು ರಕ್ಷಿಸಿ ಸಮಯಪ್ರಜ್ಞೆಯನ್ನು ಮೆರೆದಿದ್ದಾರೆ.

ಇದನ್ನು ಓದಿ : ಜೈಲಿನಿಂದ ಹೊರಬಂದ ಬೆನ್ನಲ್ಲೇ ರೌಡಿಶೀಟರ್​ ಕೊಲೆ: ದುಷ್ಕರ್ಮಿಗಳು ಪರಾರಿ

ದೂರವಾಣಿ ಮೂಲಕ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ ನಿರ್ವಾಹಕಿ ಶರಣಮ್ಮ.

ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ನಿರ್ವಾಹಕಿಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES