Sunday, January 19, 2025

ಪ್ರೇಯಸಿ ಮೇಲೆ ರಾಡ್​ನಿಂದ ಹಲ್ಲೆ ಮಾಡಿದ ಪ್ರಿಯಕರ

ಬೆಂಗಳೂರು : ಕ್ಷುಲ್ಲಕ ಕಾರಣಕ್ಕೆ ಪ್ರಿಯಕರನೇ ಪ್ರೇಯಸಿ ಮೇಲೆ ರಾಡ್‌ ನಿಂದ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಮೈಕೋಲೇಔಟ್ ನಲ್ಲಿ ನಡೆದಿದೆ.

ಟೆಕ್ಕಿ ಸ್ನೇಹ ಚಟರ್ಜಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಆರೋಪಿ ರವಿಕುಮಾರ್ ಹಾಗೂ ಸ್ನೇಹ ಇಬ್ಬರೂ ಇಂದಿರಾನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರ ನಡುವೆ ಪರಿಚಯವಾಗಿ ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ.

ಇತ್ತೀಚೆಗೆ ಬೇರೆ ಕಂಪನಿಗೆ ಸೇರಿಕೊಂಡಿದ್ದ ಸ್ನೇಹ, ರವಿಕುಮಾರ್‌ ಜೊತೆ ಅಂತರ ಕಾಯ್ದುಕೊಂಡಿದ್ದಳಂತೆ. ಪ್ರಿಯಕರನ ಕರೆಯನ್ನೂ ಸ್ನೇಹ ಸ್ವೀಕರಿಸದ ಕಾರಣ ಅನುಮಾನಗೊಂಡು ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.

ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ

ಮೈಕೋಲೇಔಟ್‌ನ ಪಿಜಿ ಬಳಿ ಆಗಸ್ಟ್ 2ರಂದು ಮುಂಜಾನೆ 3.30ರ ಸುಮಾರಿಗೆ ಕರೆಸಿಕೊಂಡು ರಾಡ್‌ನಿಂದ ತಲೆಗೆ ಹೊಡೆದಿದ್ದಾನೆ. ಗಾಯಾಳು ಸ್ನೇಹ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆರೋಪಿಯನ್ನ ಮೈಕೋಲೇಔಟ್ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ : ನಡುರಸ್ತೆಯಲ್ಲೇ ಓರ್ವ ಪುರುಷ, ಮೂವರು ಮಹಿಳೆಯರ ನಡುವೆ ಡಿಶುಂ.. ಡಿಶುಂ..!

ಕಚೇರಿಯಲ್ಲೇ ಪತ್ನಿ ಮೇಲೆ ಪತಿ ಹಲ್ಲೆ

ಶಿವಮೊಗ್ಗದ ಸರ್ಕಾರಿ ಕಚೇರಿಯಲ್ಲಿಯೇ ಪತಿ ಹಾಗೂ ಪತ್ನಿ ಕಿತ್ತಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕಚೇರಿಗೆ ತೆರಳಿದ ಪತಿ, ಪತ್ನಿ ಜೊತೆಗೆ ವಾಗ್ವಾದ ನಡೆಸಿದ್ದಲ್ಲದೆ, ಹಲ್ಲೆ ಮಾಡಿರೋ ಘಟನೆ ನಡೆದಿದೆ.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಯಾಗಿ ಶಿಲ್ಪಾ ದೊಡ್ಡಮನಿ ಕೆಲಸ ಮಾಡ್ತಿದ್ದಾರೆ. ಆದರೆ, ಪತ್ನಿ ಮೇಲೆ ಸಿಟ್ಟಿಗೆದ್ದು ಕಚೇರಿಗೆ ತೆರಳಿದ ಪತಿರಾಯ ಹಲ್ಲೆ ಮಾಡಿದ್ದಾನೆ. ಪತಿ ಶ್ರೀನಿವಾಸ್ ಮೂರ್ತಿ ಬೋರ್ಗಿ ಹಾಗೂ ಪತ್ನಿ ಜಗಳವಾಡ್ತಿರೋ ದೃಶ್ಯವನ್ನ ಮೊಬೈಲ್‌ನಲ್ಲಿ ಸೆರೆಹಿಡಿಯಲಾಗಿದೆ. ಈ ಸಂಬಂಧ ಮಹಿಳಾ ಠಾಣೆಗೆ ಶಿಲ್ಪಾ ದೂರು ನೀಡಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES