Monday, December 23, 2024

ನಡು ರಸ್ತೆಯಲ್ಲೇ ವ್ಯಕ್ತಿ ಮೇಲೆ ರೌಡಿಶೀಟರ್ ಹಲ್ಲೆ

ದಾವಣಗೆರೆ : ಟ್ರಾಫಿಕ್ ಮಾಡಬೇಡಿ ಎಂದ ವ್ಯಕ್ತಿಗೆ ರೌಡಿಶೀಟರ್ ಹಿಗ್ಗಾಮುಗ್ಗಾ ಹಲ್ಲೆ ಮಾಡಿರುವ ಘಟನೆ ದಾವಣಗೆರೆಯ ಎಸ್​.ಎಸ್ ಲೇಔಟ್​ನ ಒಳ ಕ್ರೀಡಾಂಗಣ ರಸ್ತೆಯಲ್ಲಿ ನಡೆದಿದೆ.

ರೌಡಿಶೀಟರ್ ಜಬೀ, ಸಹಚರ ಮುತ್ತುರಾಜ್ ಎನ್ನುವವರಿಂದ ಹಲ್ಲೆ ಮಾಡಲಾಗಿದೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಜಬೀ ಬಿಡುಗಡೆಯಾಗಿದ್ದ. ಗ್ರೀನ್ ಪಾರ್ಕ್ ಹೋಟೆಲ್​ನಲ್ಲಿ ಗಲಾಟೆಯಾದ ವಿಚಾರಕ್ಕೆ ಜೈಲು ಸೇರಿದ್ದ. ಮತ್ತೆ ಜಬೀ ರಸ್ತೆಯಲ್ಲಿ ಗಲಾಟೆ ಆರಂಭಿಸಿದ್ದಾನೆ.

ವ್ಯಕ್ತಿಯೋರ್ವನಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ದಾವಣಗೆರೆಯಲ್ಲಿ ರೌಡಿಗಳ ಅಟ್ಟಹಾಸಕ್ಕೆ ಜನರು ಭಯಗೊಂಡಿದ್ಧಾರೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆ ಬದಿ ನಿಂತಿದ್ದ ಬೈಕ್ ಕದ್ದು ಪರಾರಿ

ರಸ್ತೆ ಬದಿ ನಿಂತಿದ್ದ ಬೈಕ್ ಕದ್ದು ಕಳ್ಳರು ಪರಾರಿಯಾಗಿರುವ ಘಟನೆ ಬೆಳಗಾವಿಯ ಖಡೇಬಜಾರ್ ಮಾರುಕಟ್ಟೆಯಲ್ಲಿ ನಡೆದಿದೆ. ಖರೀದಿ ಮುಗಿಸಿ ಮರಳಿ ಬಂದ ಕುಟುಂಬಸ್ಥರಿಗೆ ಬೈಕ್ ನಾಪತ್ತೆ ಕಂಡು ಶಾಕ್ ಆಗಿದೆ. ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ನುಗುಸಿಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಳಗಾವಿಯ ಮಾರ್ಕೆಟ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

RELATED ARTICLES

Related Articles

TRENDING ARTICLES