ಹಾಸನ : ಪಿಡಿಓ ನಿರ್ಲಕ್ಷದಿಂದ ಡೆಂಗ್ಯೂ ಜ್ವರಕ್ಕೆ ಹಸುಗೂಸು ಬಲಿಯಾಗಿರುವ ಘಟನೆ ಅರಸೀಕೆರೆ ತಾಲೂಕಿನ ಬಂದೂರು ಗ್ರಾಮ ಪಂಚಾಯಿತಿ ಕಾಳನಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಡೆಂಗ್ಯೂ ಜ್ವರ ಗ್ರಾಮದಲ್ಲಿ ಹಲವರಲ್ಲಿ ಕಾಣಿಸಿಕೊಂಡಿದ್ದು, ಸದ್ಯಕ್ಕೆ ಹತ್ತುಕ್ಕೂ ಹೆಚ್ಚು ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನು ಓದಿ : ಕೋಟ್ಯಾಂತರ ರೂ. ಬೆಲೆಬಾಳುವ ಆಸ್ತಿ ಕಬಳಿಸಲು ಯತ್ನ; ಸಿಕ್ಕಿಬಿದ್ದ ಖದೀಮರು
ಈ ಬಗ್ಗೆ ಕಾಯಿಲೆ ಬರುವ ಮುನ್ನವೇ ಕ್ರಮ ವಹಿಸುವಂತೆ ಮನವಿ ಮಾಡಿದ್ದ ಗ್ರಾಮಸ್ಥರು. ಅಷ್ಟೇ ಅಲ್ಲದೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ರಾಜ್ಯ ಕೊಳಚೆ ನಿರ್ಮೂಲನಾ ಇಲಾಖೆಗೂ ಪತ್ರ ಬರೆದಿದ್ದ ಗ್ರಾಮಸ್ಥರು. ಆದರೆ, ಗ್ರಾಮಸ್ಥರ ಮನವಿಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದ್ದ ಪಿಡಿಓ ಮತ್ತು ನೈರ್ಮಲ್ಯ ಇಲಾಖೆ. ಇನ್ನೂ ಹಲವರಿಗೆ ಡೆಂಗ್ಯೂ ಸೋಂಕು ಹರಡುವ ಭೀತಿಯಿಂದ, ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮವಹಿಸಬೇಕು ಎಂದು ಗ್ರಾಮಸ್ಥರ ಒತ್ತಾಯ.