Thursday, January 23, 2025

ಹಾವು ಕಡಿತದಿಂದ ಚಿಕಿತ್ಸೆ ಪಡೆಯುತ್ತಿದ್ದ ಉದ್ಯೋಗಿ ಸಾವು

ಉತ್ತರ ಕನ್ನಡ : ಹಾವು ಕಡಿತದಿಂದ ಚಿಕಿತ್ಸೆ ಪಡೆಯುತ್ತಿದ್ದ ಹೈಸ್ಕೂಲ್ ಉದ್ಯೋಗಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.

ತಾಲ್ಲೂಕಿನ ಶಿರವಾಡದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಡಿ ದರ್ಜೆ ನೌಕರಳಾಗಿದ್ದ ಆನಂದಿ ಕಾಣಕೋಣಕರ(46) ಮೃತ ದುರ್ದೈವಿಯಾಗಿದ್ದಾರೆ.

ಆಗಸ್ಟ್ 1 ರಂದು ಸಂಜೆ ವೇಳೆಗೆ ಶಾಲೆಯ ಜನರೇಟರ್ ಕೊಠಡಿಯ ಬಳಿ ತೆರಳಿದ್ದ ವೇಳೆ ಹಾವು ಕಚ್ಚಿದ್ದು ಕಾರವಾರದ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಮೂರು ದಿನಗಳಿಂದ ಐಸಿಯುನಲ್ಲಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌‌.

RELATED ARTICLES

Related Articles

TRENDING ARTICLES