ಮಂಡ್ಯ : ತಮ್ಮ ಹವಾ ಸೃಷ್ಟಿಸಿಕೊಳ್ಳಲು ಹಾಡು ಹಗಲಲ್ಲೇ ರಸ್ತೆಯಲ್ಲಿ ನಿಂತಿದ್ದ ಯುವಕನ ಮೇಲೆ ಲಾಂಗ್ನಿಂದ ಹಲ್ಲೆ ಮಾಡಿದ ಘಟನೆ, ಮಂಡ್ಯದ ಹೊಳಲು ಗ್ರಾಮದಲ್ಲಿ ನಡೆದಿದೆ.
ಶಾರಂತ್ (27) ಪುಡಿ ರೌಡಿಗಳಿಂದ ಏಟು ತಿಂದ ಯುವಕ. ಗ್ರಾಮದ ಮಾದ ಅಲಿಯಾಸ್ ಮಾದಪ್ಪ ಆ್ಯಂಡ್ ಗ್ಯಾಂಗ್ನಿಂದ ಕೃತ್ಯ ಎಸಗಲಾಗಿದೆ ಎಂದು ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಮಾದಪ್ಪ, ಚಿಂಟು, ತರುಣ್, ಸುಶಾಂತ್, ಚಂದನ್ ಆರೋಪಿಗಳ ಮೇಲೆ ಬಲೆ ಬೀಸಿರುವ ಪೋಲಿಸರು.
ಇದನ್ನುಓದಿ : ಹಿಂದೂ ಯುವತಿಯರ ಕುರಿತು ಪೋಸ್ಟ್ ಮಾಡಿದ ವಿದ್ಯಾರ್ಥಿ
ಬೈಕ್ನಲ್ಲಿ ಬಂದ ಐವರಿಂದ ಹಲ್ಲೆ ನಡೆದಿದ್ದು, ಬರ್ತಡೇ ಹಿನ್ನೆಲೆ ಸ್ನೇಹಿತರೊಂದಿಗೆ ಕೇಕ್ ಕಟ್ ಮಾಡಿ ಹುಟ್ಟೂರಿಗೆ ಬರುತ್ತಿದ್ದ ಶಾರಂತ್. ಗ್ರಾಮದ ಸರ್ಕಲ್ ಒಂದರಲ್ಲಿ ಸ್ನೇಹಿತರ ಜೊತೆ ಮಾತನಾಡುತ್ತ ನಿಂತಿದ್ದ, ಈ ವೇಳೆ ಎರಡು ಬೈಕ್ನಲ್ಲಿ ಬಂದ ಐವರು ಶಾರಂತ್ ಜೊತೆ ಕ್ಯಾತೆ ತೆಗೆದಿದ್ದಾರೆ. ಏಕಾಏಕಿ ಶಾರಂತ್ ಮೇಲೆ ಮಾದ ಆ್ಯಂಡ್ ಗ್ಯಾಂಗ್ ಡ್ರ್ಯಾಗನ್ ಮತ್ತು ಲಾಂಗ್ನಿಂದ ಹಲ್ಲೆ ಮಾಡಿದ್ದಾರೆ. ಲಾಂಗ್ ಬೀಸಿದ್ದರಿಂದ ಯುವಕನ ಕಣ್ಣೀನ ಉಬ್ಬು, ಬಾಯಿಗೆ ಗಂಭೀರ ಗಾಯವಾಗಿದ್ದು, ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾದ ಶಾರಂತ್.
ಗಾಯಾಳು ಶಾರಂತ್ಗೆ 16 ಸ್ಟಿಚ್ ಹಾಕಿರುವ ಮಂಡ್ಯದ ಮಿಮ್ಸ್ ವೈದ್ಯರು. ಅಷ್ಟೇ ಅಲ್ಲ ಈ ಹಿಂದೆ ಮಾದಪ್ಪನಿಗೆ ಬಾಸ್ ಎನ್ನುವಂತೆ ಮಾದನ ಸ್ನೇಹಿತರು ಅವಾಜ್ ಹಾಕಿದ್ದು, ಈ ವೇಳೆ ಅವನ್ ಯಾವನ್ನೋ ಬಾಸ್ ಎಂದು ಟಾಂಗ್ ಕೊಟ್ಟಿದ್ದ ಶಾರಂತ್. ಅಂದು ಗಲಾಟೆ ನಡೆದು ತಣ್ಣಗಾಗಿತ್ತು. ಅದೇ ದ್ವೇಷ ಇಟ್ಟುಕೊಂಡು ಶಾರಂತ್ ಬರ್ತ್ಡೇ ದಿನವೇ ಅಟ್ಯಾಕ್ ಮಾಡಿದ ಮಾದಪ್ಪ ಆ್ಯಂಡ್ ಟೀಂ. ಹಲ್ಲೇ ನೆಡೆಸಿ ಎಸ್ಕೇಪ್ ಆಗಿರುವ ಕಿರಾತಕರ ಬಂಧನಕ್ಕೆ ಬಲೆಬೀಸಿದ ಮಂಡ್ಯ ಗ್ರಾಮಾಂತರ ಪೋಲಿಸರು.