Saturday, January 11, 2025

ಚಿತ್ರರಂಗದಲ್ಲಿ ಅನಂತ್‌‌ ನಾಗ್​ 50 ವರ್ಷ ಪೂರೈಕೆ; ಅಭಿನಂದನೆ ತಿಳಿಸಿದ ದರ್ಶನ್​

ಬೆಂಗಳೂರು: ಕನ್ನಡ ಚಿತ್ರರಂಗ ಎವರ್​ಗ್ರೀನ್​ ಹೀರೋ ಅನಂತ್​ ನಾಗ್​ ಅವರು ಚಿತ್ರರಂಗಕ್ಕೆ ಬಂದು 50 ವರ್ಷ ಪೂರೈಸಿದ ಹಿನ್ನೆಲೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರು ಟ್ವಿಟ್​ ಮಾಡಿ ಅಭಿನಂದನೆ ತಿಳಿಸಿದ್ದಾರೆ.

ತಮ್ಮ ಅಧಿಕೃತ ಟ್ವಿಟರ್​ ಖಾತೆ ಬರೆದುಕೊಂಡಿರುವ ಅವರು, ಕನ್ನಡ ಚಿತ್ರರಂಗದ ಮೇರು ನಟ ಅನಂತ್‌‌ ನಾಗ್‌ ಸರ್, ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಿದ್ದಾರೆ. ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ಎಂದಿದ್ದಾರೆ.

ಅಲ್ಲದೇ, ನಿಮ್ಮ ನಟನೆ ಕನ್ನಡ ಚಿತ್ರರಂಗದಲ್ಲಿ ಹೀಗೆ ಮುಂದುವರೆಯಲಿ ಎಂದು ದರ್ಶನ್ ಅವರು ವಿಶ್​ ಮಾಡಿದ್ದಾರೆ.

RELATED ARTICLES

Related Articles

TRENDING ARTICLES