Thursday, November 21, 2024

ಗುಡ್​ ನ್ಯೂಸ್ : ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್ ರೈಲು

ಬೆಂಗಳೂರು : ಶೀಘ್ರವೇ ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬರಲಿದೆ. ಹೈದರಾಬಾದ್ ಹಾಗೂ ಬೆಂಗಳೂರು ನಡುವೆ ಸಂಚರಿಸಲಿರುವ ಹೊಸ ರೈಲು ಆಗಸ್ಟ್ ಅಂತ್ಯಕ್ಕೆ ಸಂಚಾರ ಆರಂಭಿಸುವ ಸಾಧ್ಯತೆಯಿದೆ.

ಈಗಾಗಲೇ ರಾಜ್ಯದಲ್ಲಿ ಮೈಸೂರು-ಚೆನ್ನೈ ಹಾಗೂ ಬೆಂಗಳೂರು-ಧಾರವಾಡಗಳ ನಡುವೆ ಸಂಚರಿಸುವ ವಂದೇ ಭಾರತ್ ರೈಲುಗಳು ಇವೆ. ಇದೀಗ ಬೆಂಗಳೂರು-ಹೈದರಾಬಾದ್ ನಡುವೆ ಸಂಚಾರಕ್ಕೆ ಹೊಸ ರೈಲು ಸಜ್ಜುಗೊಳ್ಳುತ್ತಿದೆ.

ಇದು 7 ಗಂಟೆ ಅವಧಿಯಲ್ಲಿ ಯಶವಂತಪುರದಿಂದ ಕಾಚಿಗುಡ ನಡುವೆ 610 ಕಿ.ಮೀ ಕ್ರಮಿಸಲಿದೆ. ಹೊಸ ರೈಲು ಬೆಳಗ್ಗೆ ಕಾಚಿಗುಡದಿಂದ ಹೊರಟು ಮಧ್ಯಾಹ್ನ 1 ಗಂಟೆಗೆ ಬೆಂಗಳೂರು ತಲುಪಲಿದೆ. ಬಳಿಕ 2 ಗಂಟೆಗೆ ಬೆಂಗಳೂರಿನಿಂದ ಹೊರಟು ರಾತ್ರಿ ವೇಳೆಗೆ ಕಾಚಿಗುಡ ತಲುಪಲಿದೆ.

ಯಶವಂತಪುರ, ಧರ್ಮಾವರಂ, ದೋನ್ ಕರ್ನೂಲ್ ನಗರ, ಗಡ್ವಾಲ ಜಂಕ್ಷನ್, ಮೆಹಬೂಬ್ ನಗರ, ಕಾಚಿಗುಡ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚರಿಸಲಿದೆ.

RELATED ARTICLES

Related Articles

TRENDING ARTICLES