ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 45 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬಿಬಿಎಂಪಿಯ ಕಂದಾಯ ಮತ್ತು ಟೌನ್ ಪ್ಲಾನಿಂಗ್ ಕಚೇರಿಗಳ ಮೇಲೆ ದಾಳಿ ನಡೆದಿದೆ. ಲೋಕಾಯುಕ್ತ ಪೊಲೀಸರು ಜ್ಯುಡಿಶೀಯಲ್ ಅಧಿಕಾರಿಗಳ ಜಂಟಿ ದಾಳಿ ನಡೆದಿದೆ.
ವ್ಯಾಪಕ ಭ್ರಷ್ಟಾಚಾರ ಆರೋಪದ ಹಿನ್ನಲೆಯಲ್ಲಿ ದಾಳಿ ನಡೆಸಿದ್ದಾರೆ. ಬೆಂಗಳೂರಿನ ಆರ್ಓ, ಎಆರ್ಓ, ಎಡಿಡಿ, ರೆವ್ಯೂನೂ ಹಾಗೂ ಟೌನ್ ಪ್ಲಾನ್ ಕಚೇರಿಗಳು ಸೇರಿದಂತೆ ಹಲವು ಕಡೆ ಲೋಕಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
13 ನ್ಯಾಯಾಂಗ ಅಧಿಕಾರಿಗಳು, ಏಳು ಪೊಲೀಸ್ ವರಿಷ್ಠಾಧಿಕಾರಿಗಳು, 19 ಡಿವೈಎಸ್‌ಪಿ, 26 ಪೊಲೀಸ್ ಇನ್ಸ್‌ಪೆಕ್ಟರ್‌ಗಳ ಸಹಿತ ಹಲವು ಸಿಬ್ಬಂದಿ ಈ ದಾಳಿಯಲ್ಲಿ ಪಾಲ್ಗೊಂಡಿದ್ದಾರೆ. ಜಯನಗರ, ಪದ್ಮನಾಭನಗರ, ವಿಜಯನಗರ, ಬಸವನಗುಡಿ, ಬ್ಯಾಟರಾಯನಪುರ, ಯಲಹಂಕ, ವಿದ್ಯಾರಣ್ಯಪುರ, ಮಹದೇವಪುರ ಕೆ.ಆರ್.ಪುರ, ಮಲ್ಲೇಶ್ವರ ಸೇರಿದಂತೆ ಒಟ್ಟು 45 ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ.