Monday, December 23, 2024

ಸಾಲಬಾಧೆ : ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ

ವಿಜಯಪುರ : ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಅಂತರಗಂಗಿ ಗ್ರಾಮದಲ್ಲಿ ನಡೆದಿದೆ.

ರೈತ ಮಾಶ್ಯಾಳ ಎಂಬಾತ ಮೃತ ದುರ್ದೈವಿ. ವಿವಿಧ ಬ್ಯಾಂಕ್​​ಗಳಲ್ಲಿ ಈತ ಸಾಲ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ಇನ್ನು ತೋಟದಲ್ಲಿ ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

5ರಿಂದ 6 ಲಕ್ಷ ರೂಪಾಯಿಗಳನ್ನು ಸಾಲ ಮಾಡಿ ಈತ ತೋಟದಲ್ಲಿ ಬೋರ್​​​ವೆಲ್ ಕೊರೆಸಿದ್ದ. ಕೃಷಿಗೆ ಸಮರ್ಪಕ ನೀರು‌ ದೊರೆತಿರಲಿಲ್ಲ. ಇತ್ತ ಮುಂಗಾರು ಬೆಳೆ ಕೈ ಕೊಟ್ಟಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES