Friday, May 17, 2024

200 ಯೂನಿಟ್​ ಮಿತಿಯೊಳಗೆ ಬಳಸಿದವರಿಗೆ ಬಿಲ್​ ಶಾಕ್!: ಬೆಸ್ಕಾಂ ಎಂಡಿ ಸ್ಪಷ್ಟನೆ

ಬೆಂಗಳೂರು: ಗೃಹಜ್ಯೋತಿ ಯೋಜನೆಯಡಿ ರಾಜ್ಯಾದ್ಯಂತ ಗ್ರಾಮೀಣ ಭಾಗ ಮತ್ತು ನಗರ ಪ್ರದೇಶದಲ್ಲಿ ನಮ್ಮ ಬೆಸ್ಕಾಂ ಸಿಬ್ಬಂದಿಗಳು ಗ್ರಾಹಕರಿಗೆ ‘0’ ಬಿಲ್​ ನೀಡುತ್ತಿದ್ದು ಜನರು ಸಂತನ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ, ವೈಯಕ್ತಿಕವಾಗಿ ನಮಗೂ ಕೂಡ ಕರೆ ಮಾಡಿದ ಹಲವು ಗ್ರಾಹಕರು ಝೀರೋ ಬಿಲ್​ ಕಂಡು ಖುಷಿಯಾಗಿದೆ ಎಂದು ತಿಳಿಸಿದ್ದಾರೆ ಎಂದು ಬೆಸ್ಕಾಂ ಎಂಡಿ ಮಹಂತೇಶ್​ ಬೀಳಗಿ ಹೇಳಿದರು.

ಇದನ್ನೂ ಓದಿ: ಎಗ್​ ರೈಸ್​ ತಿನ್ನಲು ಬಂದವರ ಮೇಲೆ ಬಿತ್ತು ನೀರಿನ ಟ್ಯಾಂಕ್​: ಇಬ್ಬರ ದಾರುಣ ಸಾವು!  

ಈ ಕುರಿತು ನಗರದ ಬೆಸ್ಕಾಂ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು,  ಸರ್ಕಾರದ ಆದೇಶ ಸ್ಪಷ್ಟವಾಗಿದ್ದು ಇದರಲ್ಲಿ ಯಾವುದೇ ಗೊಂದಲ ಬೇಡ, ಆದೇಶದ ಪ್ರಕಾರ ಪ್ರತಿ ಮನೆಗೆ ಪ್ರತಿ ತಿಂಗಳಿಗೆ 200 ಯೂನಿಟ್​ ಬಳಕೆಯ ಮಿತಿಯ ಒಳಗೆ ಗ್ರಾಹಕರ ಮಾಸಿಕ ಬಳಕೆಯ ಸರಾಸರಿ ಏನಿದೆ ಅದರ ಮೇಲೆ ಶೇ.10 ರಷ್ಟು ಹೆಚ್ಚಿನ ಬಳಕೆಯ ಮಿತಿಗೆ ಅನುಮತಿಸಿ ಉಚಿತ ವಿದ್ಯುತ್ ಸೌಲಭ್ಯವನ್ನು ನಾವು ನೀಡುತ್ತಿದ್ದೇವೆ.

ಗೃಹಜ್ಯೋತಿ ಯೋಜನೆ ಶೂನ್ಯ ಬಿಲ್‌ ನಿರೀಕ್ಷೆಯಲ್ಲಿದ್ದವರಿಗೆ ಶಾಕ್:

ಗ್ರಾಹಕರು 2022 ಏಪ್ರಿಲ್ 1 ರಿಂದ 2023 ಮಾರ್ಚ್ 31 ವರೆಗೆ 200 ಯೂನಿಟ್​ ಗಳಿಗಿಂತಲು ಹೆಚ್ಚು ವಿದ್ಯುತ್​ ಬಳಕೆ ಮಾಡಿ, ಯೋಜನೆ ಜಾರಿಯಾದ ಬಳಿಕ 200 ಯೂನಿಟ್​​ ಒಳಗೆ ವಿದ್ಯುತ್ ಬಳಕೆ ಮಾಡಿದ್ದರು ಅವರು ಗೃಹಲಕ್ಷ್ಮಿ ಯೋಜನೆಗೆ ಅರ್ಹರಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಯೋಜನೆಯೂ ಕಳೆದ ಆರ್ಥಿಕ ವರ್ಷದಂತೆ ಜಾರಿಯಲ್ಲಿರಲಿದೆ, ಇನ್ನು ಮುಂದಿನ ದಿನಗಳಲ್ಲಿ ಸರ್ಕಾರ ಏನು ತೀರ್ಮಾನ ಕೈಗೊಳ್ಳಲಿದೆಯೊ ಅದಕ್ಕ ನಾವು ಬದ್ದರಾಗಿದ್ದೇವೆ ಎಂದರು.

RELATED ARTICLES

Related Articles

TRENDING ARTICLES