Wednesday, January 22, 2025

ನಟಿ ಮಮತಾ ಗೂಡೂರ ವಿಧಿವಶ

ಬೆಂಗಳೂರು : ರಂಗಭೂಮಿ ಕಲಾವಿದೆ, ನಟಿ ಮಮತಾ ಗೂಡೂರ ಅವರು ಮೆದುಳಿನ ರಕ್ತಸ್ರಾವದಿಂದ ನಿಧನರಾಗಿದ್ದಾರೆ. 75ನೇ ವಯಸ್ಸಿಗೆ ಇಹಲೋಕ ತ್ಯಜಿಸಿರೋ ಕಲಾವಿದೆ ಮಮತಾಗೆ ಆಪ್ತರು, ಹಿತೈಷಿಗಳು ಸಂತಾಪ ಸೂಚಿಸಿದ್ದಾರೆ.

ನಟಿ ಮಮತಾ ಗೂಡೂರ ಅವರಿಗೆ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿತ್ತು. ಹಾಗಾಗಿ, ಅವರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಯಾವುದೇ ಪ್ರಯೋಜನ ಆಗಲಿಲ್ಲ. ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಮಮತಾ ಇಹಲೋಕ ತ್ಯಜಿಸಿದರು.

ಮಮತಾ ಅವರ ಕಲಾ ಸೇವೆ, ನಟನೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿತ್ತು. ಮಮತಾ ಬಾಗಲಕೋಟೆಯ ಇಳಕಲ್ ತಾಲ್ಲೂಕಿನ ಗೂಡೂರ ಗ್ರಾಮದವರಾಗಿದ್ದಾರೆ. ಮಮತಾ ಅವರು 2 ಸಾವಿರಕ್ಕೂ ಅಧಿಕ ನಾಟಕಗಳಲ್ಲಿ ನಟಿಸಿದ್ದರು. 20 ಸಿನಿಮಾಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿದ್ದರು. ಕನ್ನಡ ಚಿತ್ರರಂಗದ ನಟರಾದ ಅಂಬರೀಶ್, ವಜ್ರಮುನಿ ಸೇರಿ ಅನೇಕರ ಜೊತೆ ಮಮತಾ ನಟಿಸಿದ್ದರು.

RELATED ARTICLES

Related Articles

TRENDING ARTICLES