Monday, December 23, 2024

ಗುಟ್ಕಾ, ಮದ್ಯಕ್ಕಾಗಿ ಟವರ್ ಏರಿದ ಯುವಕ

ವಿಜಯಪುರ : ಗುಟ್ಕಾ ಹಾಗೂ ಮದ್ಯಕ್ಕಾಗಿ ಯುವಕ ಮತ್ತೆ ಮೊಬೈಲ್ ಟವರ್ ಏರಿದ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ‌ ತಾಲೂಕಿನ ಚಾಂದಕವಟೆ ಗ್ರಾಮದಲ್ಲಿ ನಡೆದಿದೆ.

ಟವರ್‌ನ ತುತ್ತ ತುದಿಯಲ್ಲಿ ನಿಂತು ಯುವಕನ ಹುಚ್ಚಾಟ ಮಾಡಿದ್ದಾನೆ. ಕೆಲ‌ ದಿನಗಳ ಹಿಂದಷ್ಟೆ ಇದೇ ವ್ಯಕ್ತಿ ಬಳಗಾನೂರು ಗ್ರಾಮದಲ್ಲಿ ಬೆತ್ತಲೆಯಾಗಿ ಟವರ್ ಹತ್ತಿ ಹುಚ್ಚಾಟ ಮೆರೆದಿದ್ದ. ಈಗ ಅದೆ ಯುವಕ ಮತ್ತೆ ಟವರ್ ಹತ್ತಿ ಹುಚ್ಚಾಟ ಮಾಡಿದ್ದಾನೆ.

ಅಂದು ಕುಡಿದ ನಶೆಯಲ್ಲಿ ಟವರ್ ಏರಿ ಆತಂಕ‌ ಮೂಡಿಸಿದ್ದ. ರಾಯಲ್ ಚಾಯ್ಸ್ ವಿಸ್ಕಿ, ವಿಮಲ್ ಗುಟ್ಕಾ ಆಸೆ ತೋರಿಸಿ ಪೊಲೀಸರು ಕೆಳಗಿಳಿಸಿದ್ದರು. ಅಂದು ಸತೀಶ್ ನನ್ನ ಆಲಮೇಲ ಪೊಲೀಸರು ವಶಕ್ಕೆ ಪಡೆದಿದ್ದರು. ಇಂದು ಕೂಡ ಅದೇ ರೀತಿ ಹುಚ್ಛಾಟ ತೋರಿದ್ದಾನೆ.

ವಿವಸ್ತ್ರವಾಗಿ ಟವರ್ ಏರಿದ್ದ

ಇತ್ತೀಚೆಗೆ ವಿವಸ್ತ್ರವಾಗಿ ಮೊಬೈಲ್​ ಟವರ್ ಏರಿದ್ದನು. ಬಟ್ಟೆಗಳನ್ನು ಬಿಚ್ಚಿ ನಗ್ನವಾಗಿಯೇ ಟವರ್ ಹತ್ತಿದ ಯುವಕ, ವಿಚಿತ್ರವಾಗಿ ವರ್ತನೆ ಮಾಡಿತ್ತಿದ್ದನು. ಟವರ್ ತುದಿಯ ಮೇಲೆ ಹತ್ತಿ ಅಪಾಯಕಾರಿಯಾಗಿ ವರ್ತನೆ ಮಾಡಿದ್ದನು.

RELATED ARTICLES

Related Articles

TRENDING ARTICLES