ಚಿತ್ರದುರ್ಗ : ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಮೂವರು ಸಾವನ್ನಪ್ಪಿರುವ ಪ್ರಕರಣ ಕುರಿತು ಹರಳಯ್ಯ ಮಠದ ಬಸವ ಹರಳಯ್ಯ ಶ್ರೀಗಳು ಪತ್ರಿಕ್ರಿಯೆ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ವೈಯಕ್ತಿಕ ದ್ವೇಷದಿಂದ ನೀರಿನಲ್ಲಿ ವಿಷ ಬೆರೆಸಿದ್ದಾರೆಂಬ ಶಂಕೆಯಿದೆ. ದ್ವೇಷದಿಂದ ಆಗಿದ್ದರೆ ಮಾತ್ರ ಇಷ್ಟೊಂದು ಸಮಸ್ಯೆ ಸಾಧ್ಯ ಎಂದು ಹೇಳಿದ್ದಾರೆ.
ನೀರಿನ ಸಮಸ್ಯೆ ಆಗಿದ್ದರೆ ಇಡೀ ಬಡಾವಣೆಗೆ ಆಗಬೇಕಿತ್ತು. ದಲಿತ ಕೇರಿ(ಕಾಲೋನಿ)ಗೆ ಮಾತ್ರ ಕಲುಷಿತ ನೀರು ಪೂರೈಕೆ ಆಗಿದೆ. ಉದ್ದೇಶಪೂರಿತವಾಗಿ ನಡೆದ ಘಟನೆ ಇದಾಗಿದೆ. ಈ ಘಟನೆಯಿಂದ ಮತ್ತೊಂದು ಮಣಿಪುರ ಸೃಷ್ಠಿ ಆತಂಕ. ಸರ್ಕಾರ ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಚಿತ್ರದುರ್ಗ ಕಲುಷಿತ ನೀರು ಪ್ರಕರಣ : ಘಟನೆ ಬಗ್ಗೆ ತನಿಖೆ ನಡೆಸಲು ಸಿಎಂ ಆದೇಶ
25 ಲಕ್ಷ ಪರಿಹಾರ ಘೋಷಿಸಬೇಕು
ರಾಜ್ಯ ಸರ್ಕಾರ ಮೃತರ ಕುಟುಂಬಕ್ಕೆ ತಲಾ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಬೇಕು. ಘಟನೆ ಪುನರಾವರ್ತನೆ ಆಗದಂತೆ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ದೊಡ್ಡ ಗದ್ದಲ, ಹೋರಾಟಕ್ಕೆ ಸರ್ಕಾರವೇ ಹೊಣೆ ಎಂದು ಶ್ರೀಗಳು ತಿಳಿಸಿದ್ದಾರೆ.