Wednesday, January 22, 2025

ನಾನು ಉಪವಾಸ ಸತ್ಯಾಗ್ರಹ ಮಾಡ್ತೀನಿ : ಡಾ.ಕೆ ಸುಧಾಕರ್ ಎಚ್ಚರಿಕೆ

ಚಿಕ್ಕಬಳ್ಳಾಪುರ : ಮೆಡಿಕಲ್‌ ಕಾಲೇಜು ಆರಂಭ ಮಾಡದಿದ್ರೆ, ನಾನು ಉಪವಾಸ ಸತ್ಯಾಗ್ರಹ ಮಾಡ್ತೀನಿ ಎಂದು ಸರ್ಕಾರಕ್ಕೆ ಮಾಜಿ ಸಚಿವ ಡಾ.ಕೆ. ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.

ಲೋಕಸಭಾ ಚುನಾವಣೆ ಸ್ಪರ್ಧೆ ವಿಚಾರವಾಗಿ ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಆದೇಶದದನ್ವಯ ನಾನು ಕೆಲಸ ಮಾಡುತ್ತೇನೆ. ಪಕ್ಷ ಹೇಳಿದ್ರೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ನಾನಾಗಿ ನಾನು ಯಾವ ಪಕ್ಷದ ನಾಯಕರ ಬಳಿ ಕೇಳೋ ಪ್ರಶ್ನೆ ಇಲ್ಲ. ಪಕ್ಷ ಸಂಘಟನೆ ಮಾಡೋದು ನನ್ನ ಉದ್ದೇಶ ಎಂದು ಹೇಳಿದ್ದಾರೆ.

ಬಹಳ ಮುಜಗರ ಆಗ್ತಿದೆ

ವಿರೋಧ ಪಕ್ಷದ ನಾಯಕನ ಆಯ್ಕೆ ವಿಳಂಬ ವಿಚಾರವಾಗಿ ಮಾತನಾಡಿ, ವೈಯುಕ್ತಿಕವಾಗಿ ನನಗೆ ಬೇಸರ ಇದೆ. ಬಹಳ ಮುಜಗರ ಆಗ್ತಿದೆ. ನಾವು ಉತ್ತರ ಕೊಡಲು ಆಗುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ವಿಪಕ್ಷ ನಾಯಕರ ಆಯ್ಕೆ ಮಾಡಿಸಬೇಕು ಎಂದು ಅವಲೊತ್ತುಕೊಂಡಿದ್ದಾರೆ.

ಕಾಂಗ್ರೆಸ್ 34ಕ್ಕೆ ಬರಲಿಲ್ವಾ?

ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಕುರಿತು ಮಾತನಾಡಿ, ಕೆಟ್ಟ ಫಲಿತಾಂಶ ಬಂದಿದ್ರೂ ಪಕ್ಷದ ನಾಯಕರ ಮೇಲೆ ದೂರಬಾರದು. 134 ಇದ್ದ ಸ್ಥಾನಗಳು ಕಾಂಗ್ರೆಸ್ 34ಕ್ಕೆ ಬರಲಿಲ್ವಾ? ಕರ್ನಾಟಕ ಯಾವುದೇ ಪಕ್ಷದ ಆಡಳಿತ ಸತತ ೧೦ ವರ್ಷ ಮಾಡಲಿಲ್ಲ. ಇದು ಕರ್ನಾಟಕದ ಪ್ಯಾಟ್ರನ್ ಎಂದು ಡಾ.ಕೆ ಸುಧಾಕರ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES