Wednesday, January 22, 2025

ಧರ್ಮಾಧಿಕಾರಿಗಳು ಅಪರಾಧಿಯಾಗಿದ್ರೆ ಅವರಿಗೆ ಜೈಲಾಗಲಿ : ಜೈನಮುನಿ

ಧಾರವಾಡ : ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಅಪಪ್ರಚಾರ ಮಾಡಿದ್ರೆ ನಾನು ಸಹಿಸಲ್ಲ. ಅವರು, ಅವರ ಕುಟುಂಬ ಅಪರಾಧಿಯಾಗಿದ್ರೆ ಅವರಿಗೆ ಜೈಲಾಗಲಿ ಎಂದು ವರೂರು ನವಗೃಹ ತೀರ್ಥ ಕ್ಷೇತ್ರದ ಜೈನಮುನಿ ಆಚಾರ್ಯ ಗುಣಧರನಂದಿ ಮಹಾರಾಜ್ ಹೇಳಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅವರು ಅಪರಾಧಿ ಎಂದು ಯಾರೋ ನಿರ್ಧಾರ ಮಾಡೋಕೆ ಸಾಧ್ಯವಿಲ್ಲ. ಅದಕ್ಕೆ ಆದರದ ಆದ ತನಿಖೆ, ನ್ಯಾಯಾಂಗ ವ್ಯವಸ್ಥೆ ಇದೆ ಎಂದು ತಿಳಿಸಿದ್ದಾರೆ.

ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ಆದರೆ, ಇಂತಹ ರಾಜ್ಯದಲ್ಲಿ ಹಿಂಸಾಕೃತ್ಯ ನಡೆಯಬಾರದು. ಸೌಜನ್ಯ ಕೊಲೆ ಪ್ರಕರಣ ನಮ್ಮ ಮನಸ್ಸಿಗೆ ಬಹಳ ನೋವಾಗಿದೆ. ಯಾರು ಕೊಲೆ ಮಾಡಿದ್ದಾರೆ ಅವರಿಗೆ ಮನಃಪರಿವರ್ತನೆ ಮಾಡುವ ಶಿಕ್ಷೆ ಆಗಬೇಕು. ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ನುಡಿದರು.

ಸೌಜನ್ಯಗೆ ನ್ಯಾಯ ಸಿಗಬೇಕು

ನಮಗೆ ಗೃಹ ಸಚಿವರು, ಪೊಲೀಸರ ಮೇಲೆ ನಂಬಿಕೆ ಇದೆ. ಒಳ್ಳೆಯ ಆಡಳಿತ ನೀಡಿದ ಸಿದ್ದರಾಮಯ್ಯ ಇದಾರೆ, ಅವರ ಮೇಲೆ ನಂಬಿಕೆ ಇದೆ. ಸೌಜನ್ಯಗೆ ನ್ಯಾಯ ಸಿಗಬೇಕು, ಆದರೆ, ಮುಖವಾಡ ಹೊತ್ತು ಧರ್ಮಾಧಿಕಾರಿಗಳ ಬಗ್ಗೆ ಅಪಪ್ರಚಾರ ಮಾಡಬಾರದು. ಧರ್ಮಸ್ಥಳಕ್ಕೆ ಎಲ್ಲಾ ಧರ್ಮದವರು ಹೋಗ್ತಾರೆ. ಅನ್ನ ದಾಸೋಹ ಮಾಡಿದ ಮಠದ ಬಗ್ಗೆ ಅಪಪ್ರಚಾರ ಸರಿ ಅಲ್ಲ ಎಂದು ಬೇಸರಿಸಿದರು.

ಧರ್ಮಸ್ಥಳ ಕ್ಷೇತ್ರವನ್ನು ಟಾರ್ಗೆಟ್

ಪದೇ ಪದೆ ಅಪಪ್ರಚಾರ ಮಾಡಿ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ. ಮಾನಸಿಕ ಹಿಂಸೆ ಕೂಡ ಒಂದು ದೊಡ್ಡ ಹಿಂಸೆ. ದೇಹದ ನೋವಿಗಿಂತ ಮನಸ್ಸಿಗೆ ಆಗುವ ನೋವು ಕಷ್ಟ ಕೊಡುತ್ತದೆ. ಆಧಾರ ರಹಿತವಾಗಿ ಧರ್ಮಸ್ಥಳ ಕ್ಷೇತ್ರವನ್ನು ಟಾರ್ಗೆಟ್ ಮಾಡೋದು ಸರಿಯಲ್ಲ ಎನ್ನುವ ಮೂಲಕ ಧರ್ಮಸ್ಥಳದ ಧರ್ಮಾಧಿಕಾರಿ ಪರ ಜೈನ ಮುನಿ ಗುಣಧರನಂದಿ ಸ್ವಾಮೀಜಿ ಬ್ಯಾಟ್ ಬೀಸಿದರು.

RELATED ARTICLES

Related Articles

TRENDING ARTICLES