Sunday, December 22, 2024

ಸೂಟ್​ಕೇಸ್ ತುಂಬಿಸೋದು ಇವರ ಗುರಿ : ರವಿಕುಮಾರ್ ಕಿಡಿ

ಬೆಂಗಳೂರು : ಸೂಟ್​ಕೇಸ್ ತುಂಬಿಸಿಕೊಂಡು ಹೋಗಿ ದೆಹಲಿಗೆ ಕೋಡೊದು. ಇದು ಕರ್ನಾಟಕ ಸರ್ಕಾರ ಮಾಡುತ್ತಿರುವ ಕೆಲಸ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಕಾಂಗ್ರೆಸ್​​ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೂಟ್​ಕೇಸ್ ತುಂಬಿಸೋದು ಇವರ ಗುರಿ. ಲೋಕಸಭೆ ಚುನಾವಣೆಯಲ್ಲಿ ಜನ ಇವರಿಗೆ ಪಾಠ ಕಲಿಸುತ್ತಾರೆ ಎಂದು ಕುಟುಕಿದ್ದಾರೆ.

ಕಾಂಗ್ರೆಸ್​​ ಸರ್ಕಾರ ಬಂದ್ಮೇಲೆ ಎಲ್ಲದರಲ್ಲೂ ಬೆಲೆ ಹೆಚ್ಚಳ ಮಾಡಿದ್ದಾರೆ. ಈ ಸರ್ಕಾರಕ್ಕೆ ಧಿಕ್ಕಾರ ಹೇಳುತ್ತೇನೆ. ಲೋಕಸಭಾ ಚುನಾವಣೆಗೆ ಎಷ್ಟು ಸೂಟ್​ಕೇಸ್ ತಂದು ಕೊಡ್ತೀರಿ ಎಂದು ಟಾರ್ಗೆಟ್ ನೀಡಲು ದೆಹಲಿಯಲ್ಲಿ ಸಭೆ ಕರೆದಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಎಲ್ಲಾ ನೀರಿಕ್ಷೆ ಹುಸಿಯಾಗಿದೆ

ದೆಹಲಿಯಲ್ಲಿ ನಡೆಯುತ್ತಿರೋದು ಲೋಕಸಭೆಯಲ್ಲಿ ಹೆಚ್ಚು ಸೀಟ್ ಗೆಲ್ಲಬೇಕು ಎಂದು ಮಾಡುತ್ತಿರುವ ಸಭೆ ಅಲ್ಲ‌. ಹೆಚ್ಚು ಸೂಟ್​ಕೇಸ್ ತುಂಬಿಸಿಕೊಡಬೇಕು ಎಂದು ಸಭೆ ಮಾಡ್ತಾ ಇದ್ದಾರೆ. ಕಾಂಗ್ರೆಸ್ ಸರ್ಕಾರ ಬಂದಮೇಲೆ ಜನರಿಗೆ ಅನುಕೂಲ ಆಗಬಹುದು ಎಂದು ನಿರೀಕ್ಷೆ ಇತ್ತು. ಆದರೆ, ಎಲ್ಲಾ ನೀರಿಕ್ಷೆ ಹುಸಿಯಾಗಿದೆ ಎಂದು ಕುಟುಕಿದ್ದಾರೆ.

RELATED ARTICLES

Related Articles

TRENDING ARTICLES