Saturday, January 4, 2025

ಪತ್ನಿ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ಪತಿ

ಹಾಸನ : ಕುಟುಂಬಸ್ಥರ ಕಿರುಕುಳದಿಂದ ಮನನೊಂದು ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆಯ ಹೊಳೇನರಸೀಪುರ ತಾಲೂಕಿನ ಹಳೆಕೋಟೆ ಹೋಬಳಿ ಮಳಲಿಯಲ್ಲಿ ನಡೆದಿದೆ.

ಮೃತ ಯುವಕನನ್ನು ಕಿರಣ್ ಬಿ.ಬಿ.(26) ಮೂಲತಃ ಉದಯಪುರ ನಿವಾಸಿಯಾಗಿದ್ದರು. ಯುವಕ ಸ್ವಂತ ಗ್ರಾಮದಲ್ಲಿ ಬೇಕರಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಕಳೆದ ಫೆಬ್ರುವರಿ 19ರಂದು ದಂಡಿಗನಹಳ್ಳಿ ಹೋಬಳಿ, ವಗರಹಳ್ಳಿ ಗ್ರಾಮದ ಸ್ಪಂದನ (24) ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದರು. ಮದುವೆ ನಂತರ ಪತ್ನಿ ಸ್ಪಂದನ ಕಿರಣ್ ಜೊತೆ ಸಂಸಾರ ನಡೆಸದೆ ತವರು ಮನೆ ಸೇರಿದ್ದಳು.

ಇದನ್ನು ಓದಿ : ಮೊಬೈಲ್​ ಚಾರ್ಜರ್​ಗೆ 8 ತಿಂಗಳ ಮಗು ಧಾರುಣ ಸಾವು!

ಆಕೆಯ ಪೋಷಕರು ಕಿರಣ್ ವಿರುದ್ಧ ಸುಳ್ಳು ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಿದ್ದರು. ಅವರು ವಾರದ ಹಿಂದೆ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದರು. ಬಳಿಕ ಆಕೆಯ ತಂದೆ ವಾಸು, ತಾಯಿ ಗೀತಾ, ಅಜ್ಜಿ ರತ್ನಮ್ಮ ಕಿರಣ್ ಬಳಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದರು. ಈ ವಿಷಯಕ್ಕೆ ಮನನೊಂದು ಜುಲೈ 31ರ ರಾತ್ರಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಘಟನೆ ಹೊಳೇನರಸೀಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು

RELATED ARTICLES

Related Articles

TRENDING ARTICLES