Friday, April 4, 2025

ಬಾಲ್ಯ ಸ್ನೇಹಿತನೆಂದು ಹೇಳಿಕೊಂಡು ಮಹಿಳೆ ಬಳಿ ಲಕ್ಷ ಲಕ್ಷ ಹಣ ದೋಚಿದ ವಂಚಕ!

ಬೆಂಗಳೂರು: ಬಾಲ್ಯದ ಗೆಳೆಯ ಎಂದು ಹೇಳಿಕೊಂಡು ಮಹಿಳೆಗೆ ಕರೆಮಾಡಿದ ವಂಚಕ, ಸಿನೀಮಿಯ ರೀತಿಯಲ್ಲಿ ಮಹಿಳೆಯಿಂದ ಲಕ್ಷ ಲಕ್ಷ ಹಣ ಪಡೆದು ಮೋಸ ಮಾಡಿರುವ ಘಟನೆ ನಗರದ ರಾಮಮೂರ್ತಿ ನಗರದಲ್ಲಿ ನಡೆದಿದೆ.

ಇದನ್ನೂ ಓದಿ: ಸೌಜನ್ಯ ಪ್ರಕರಣ: ಇನ್ನು ಮುಂದೆ ಧರ್ಮಸ್ಥಳಕ್ಕೆ ಹೋಗೊಲ್ಲ ನಟ ದುನಿಯಾ ವಿಜಯ್​ ಪೋಸ್ಟ್​ ವೈರಲ್!​

ಕಿರಣ್ ಬಂಧಿತ ಆರೋಪಿ, ಕಳೆದ 2022, ನವೆಂಬರ್‌ನಲ್ಲಿ, ಇಂದಿರಾನಗರದಿಂದ ಬಾಣಸವಾಡಿಗೆ ಕ್ಯಾಬ್​ ಬುಕ್​ ಮಾಡಿ ಕ್ಯಾಬ್​ ನಲ್ಲಿ ಪ್ರಯಾಣ ಬೆಳೆಸಿದ್ದರು, ಈ ವೇಳೆ ಕ್ಯಾಬ್​ ಡ್ರೈವರ್​ ಮಹಿಳೆಯನ್ನು ಪರಿಚಯ ಮಾಡಿಕೊಂಡು ಮಾತಿಗಿಳಿದಾಗ ಕ್ಯಾಬ್​ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ತನ್ನ ಬಾಲ್ಯ ಸ್ನೇಹಿತನ ಬಗ್ಗೆ ಹೇಳಿಕೊಂಡಿದ್ದರು,

ಇದಾದ ಕೆಲ ದಿನಗಳ ಬಳಿಕ ಮಹಿಳೆಯ ಮೊಬೈಲ್​ ನಂಬರ್​ಗೆ ಮೆಸೇಜ್​ ಮಾಡಿ, ನಾನು ನಿಮ್ಮ ಬಾಲ್ಯ ಸ್ನೇಹಿತ ಹೇಳಿಕೊಂಡು ಮಾತನಾಡುತ್ತಿದ್ದ. ನಂತರ ಹಣಕಾಸಿನ ತೊಂದರೆ ಇದೆ ಎಂದು ಸಹಾಯಕ್ಕಾಗಿ ಬೇಡಿಕೆ ಇಟ್ಟಿದ್ದ ಬಾಲ್ಯ ಸ್ನೇಹಿತ ಅಂತ ಕನಿಕರ ತೋರಿಸಿ ಹಣ ಕಳಿಸಿದ್ದ ಮಹಿಳೆ ಸುಮಾರು 22 ಲಕ್ಷ ಹಣ ರೂಪಾಯಿ ಕಳುಹಿಸಿದ್ದಳು,

ಮಹಿಳೆ ಬಳಿ ಹಣ ಪಡೆದು ಮೋಜು-ಮಸ್ತಿ ಮಾಡಿದ್ದ ಆರೋಪಿ ಕಿರಣ್‌ ಗೆ ದುರಾಸೆ ಹೆಚ್ಚಾಗಿ, ಬಳಿಕ, ನಿನ್ನ ಮತ್ತು ನಿನ್ನ ಸ್ನೇಹಿತನ ವಿಚಾರ ಎಲ್ಲರಿಗೂ ಹೇಳ್ತೇನೆ, ಅಷ್ಟೆ ಅಲ್ಲ ಈ ವಿಚಾರವನ್ನು ನಿನ್ನ ಪತಿಗೂ ಹೇಳುತ್ತೇನೆಂದು ಮಹಿಳೆಗೆ ಬೆದರಿಕೆ ಹಾಕಿ ಬ್ಲ್ಯಾಕ್‌ಮೇಲ್‌ ಮಾಡಿ 750 ಗ್ರಾಂ ಚಿನ್ನ ದೋಚಿದ್ದಾನೆ.

ಕೂಡಲೇ ಮಹಿಳೆಯೂ ರಾಮಮೂರ್ತಿನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ, ಪ್ರಕರಣ ಬೆನ್ನಹತ್ತಿದ ಪೊಲೀಸರು ಆರೋಪಿ ಕಿರಣ್‌ ಕುಮಾರ್‌ನನ್ನ ವಶಕ್ಕೆ ಪಡೆದಿದ್ದಾರೆ.

RELATED ARTICLES

Related Articles

TRENDING ARTICLES