Thursday, December 5, 2024

ಹೊಸ ರೂಲ್ಸ್ ಗೊತ್ತಿಲ್ಲ, ದಂಡ ಕಟ್ಟಲ್ಲ : ಪೊಲೀಸ್​ಗೆ ಬೈಕ್ ಸವಾರ ಅವಾಜ್

ಮಂಡ್ಯ : ಎಕ್ಸ್‌ಪ್ರೆಸ್‌ ವೇನಲ್ಲಿ ದಂಡ ವಸೂಲಿ ಮಾಡುತ್ತಿದ್ದ ಪೊಲೀಸ್‌ಗೆ ಬೈಕ್ ಸವಾರ ಅವಾಜ್ ಹಾಕಿರುವ ಘಟನೆ ಮಂಡ್ಯದ ಉಮ್ಮಡಹಳ್ಳಿ ಗೇಟ್ ಬಳಿ ನಡೆದಿದೆ.

ಪೊಲೀಸರಿಗೆ ರೂಲ್ಸ್ ಪಾಠ ಹೇಳಲು ಹೋಗಿ ಬೈಕ್ ಸವಾರ ಕಕ್ಕಾಬಿಕ್ಕಿಯಾಗಿದ್ದಾನೆ. ಎಕ್ಸ್‌ಪ್ರೆಸ್‌ ಹೈವೇಯಲ್ಲಿ ಬೈಕ್ ಚಲಾಯಿಸಿಕೊಂಡು ಬಂದಿದ್ದಾನೆ. ಈ‌ ವೇಳೆ ಬೈಕ್ ತಡೆದು ದಂಡ ಕಟ್ಟುವಂತೆ ಪೊಲೀಸರು ಹೇಳಿದ್ದಾರೆ.

ಇದನ್ನು ಓದಿ : ಇವ್ರ ಮಂತ್ರಿಗಳಿಗೆ ಲಡ್ಡು ಸಿಕ್ತಿಲ್ಲ, ತಿಮ್ಮಪ್ಪನಿಗೆ ಏನು ಲಡ್ಡು : ಇಬ್ರಾಹಿಂ

ನಂಗೆ ಹೊಸ ನಿಯಮ ಗೊತ್ತಿಲ್ಲ

ಈ ವೇಳೆ ‘ನನಗೆ ಗೊತ್ತಿಲ್ಲ‌ ನಾನು ದಂಡ ಕಟ್ಟಲ್ಲ. ನೀವು ಹೈವೇಗೆ ಹತ್ತುವಾಗ ಹತ್ತಬೇಡಿ ಅಂತಾ ಹೇಳಲ್ಲ. ಈಗ ದಂಡ ಕಟ್ಟಿ ಅಂತೀರಾ, ನಾನು ಕಟ್ಟಲ್ಲ. ನಂಗೆ ಹೊಸ ನಿಯಮ ಗೊತ್ತಿಲ್ಲ’ ಎಂದು‌ ಬೈಕ್ ಸವಾರ ಪೊಲೀಸರಿಗೆ  ಅವಾಜ್ ಹಾಕಿದ್ದಾನೆ.

TVಯಲ್ಲಿ ಬರ್ತಾ ಇದೆ ನೋಡಿಲ್ವಾ?

‘ನೀವು ಹತ್ತುವಾಗ ಬೋರ್ಡ್ ಹಾಕಿದ್ದೇವೆ ನೋಡಿದ್ರಾ? ನಿನ್ನೆ ಮೊನ್ನೆಯಿಂದ ಟಿವಿಯಲ್ಲಿ ಬರ್ತಾ ಇದೆ ನೋಡಿಲ್ವಾ ಎಂದು ಪೊಲೀಸರು ಹೇಳಿದ್ದಾರೆ. ನಾನು ಈ ಹೊಸ ರೂಲ್ಸ್ ಎಲ್ಲೂ ನೋಡಿಲ್ಲ. ನಾನು ಕಟ್ಟಲ್ಲ’ ಎಂದು ಬೈಕ್ ಸವಾರ ಮೊಂಡುವಾದ ಮಾಡಿದ್ದಾನೆ.

ಹೀಗೆ, ಬೈಕ್ ಸವಾರ ಹಾಗೂ ಪೊಲೀಸರ ನಡುವೆ ಕೆಲಕಾಲ ವಾಗ್ವಾದ ನಡೆದಿದೆ. ಬಳಿಕ, ಬೈಕ್ ಸವಾರ ಮಂಕಾಕಿ ದಂಡ ಕಟ್ಟಿ ತೆರಳಿದ್ದಾನೆ.

RELATED ARTICLES

Related Articles

TRENDING ARTICLES