Wednesday, January 22, 2025

ಡಿ.ಕೆ ಸುರೇಶ್​ ದೂರಿನ ಬೆನ್ನಲ್ಲೇ 11 ಇನ್ಸ್​ಪೆಕ್ಟರ್​ಗಳ ವರ್ಗಾವಣೆಗೆ ತಡೆ!

ಬೆಂಗಳೂರು: 211 ಇನ್ಸ್​ಪೆಕ್ಟರ್​ಗಳನ್ನ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ  ಸಂಸದ ಡಿ.ಕೆ.ಸುರೇಶ್ ವರ್ಗಾವಣೆ ಕುರಿತು ಹೈಕಮಾಂಡ್​ ಗೆ ದೂರನ್ನು ನೀಡಿದ್ದಾರೆ, ದೂರಿನ ಬಂದ ಕೂಡಲೇ ಬೆಂಗಳೂರು ಸೇರಿದಂತೆ ಒಟ್ಟು 11 ಪೊಲೀಸ್ ಇನ್ಸ್​ಪೆಕ್ಟರ್​ಗಳ ವರ್ಗಾವಣೆಗೆ ತಡೆಹಿಡಿಯಲಾಗಿದೆ.

ಇದನ್ನೂ ಓದಿ: ಧರ್ಮಸ್ಥಳ ಹಾಗೂ ಹೆಗ್ಗಡೆ ಕುಟುಂಬದ ವಿರುದ್ದ ಅಪಪ್ರಚಾರ !: ಡಿ. ವೀರೇಂದ್ರ ಹೆಗ್ಗಡೆ

ಬುಧವಾರ, ಸರ್ಕಾರ 211 ಸಿವಿಲ್ ಇನ್ಸ್​ಪೆಕ್ಟರ್​ಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಇಂದು ಬೆಳ್ಳಂಬೆಳ್ಳಗೆ ಐವರು ಇನ್ಸ್​ಪೆಕ್ಟರ್​ಗಳಿಗೆ DGIGP ಕಚೇರಿಯಿಂದ ಆದೇಶವನ್ನ ತಡೆಹಿಡಿಯಲಾಗಿದೆ. ಸಂಸದ ಡಿ.ಕೆ.ಸುರೇಶ್ ಕೊಟ್ಟ ದೂರಿನ ಮೇರೆಗೆ ಬೆಂಗಳೂರು ಸೇರಿದಂತೆ ಒಟ್ಟು 11 ಪೊಲೀಸ್ ಇನ್ಸ್​ಪೆಕ್ಟರ್​ಗಳ ವರ್ಗಾವಣೆಗೆ ತಡೆಹಿಡಿಯಲಾಗಿದೆ.

RR ನಗರ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರದ ಪೊಲೀಸ್ ಇನ್ಸ್​​ಪೆಕ್ಟರ್​ಗಳ ವರ್ಗಾವಣೆಯನ್ನ ತಡೆಹಿಡಿಯಲಾಗಿದೆ. ತಾವು ಕೊಟ್ಟ ಲಿಸ್ಟ್​ನ್ನು ಗೃಹ ಇಲಾಖೆ ಪರಿಗಣನೆಗೆ ತೆಗೆದುಕೊಳ್ಳದೇ ವರ್ಗಾವಣೆ ಮಾಡಲಾಗಿದೆ ಎಂದು ರಣದೀಪ್ ಸುರ್ಜೇವಾಲಾಗೆ‌ ಡಿ.ಕೆ.ಸುರೇಶ್ ದೂರು ನೀಡಿದ್ದರು.

ನಿನ್ನೆ ರಾತ್ರಿ 211 ಸಿವಿಲ್ ಇನ್ಸ್​ಪೆಕ್ಟರ್​ಗಳನ್ನ ವರ್ಗಾವಣೆ ಮಾಡಿ‌ ಗೃಹ ಇಲಾಖೆ ಆದೇಶ ಹೊರಡಿಸಿತ್ತು. ಇದೀಗ 11 ವರ್ಗಾವಣೆಗಳನ್ನ ತಡೆಹಿಡಿದಿದ್ದು, ಗೃಹಸಚಿವರಿಗೆ ಸುರ್ಜೇವಾಲಾ ಫೋನ್ ಮಾಡಿ ಆದೇಶ ತಡೆ ಹಿಡಿಸಿದ್ದಾರೆ ಎಂಬ ಪ್ರಶ್ನೆ ಮೂಡಿದೆ.

RELATED ARTICLES

Related Articles

TRENDING ARTICLES