Sunday, January 19, 2025

4 ಮದುವೆಯಾಗಿ ವಂಚಿಸಿದ ಪತಿಗೆ ಚಪ್ಪಲಿ ಏಟು ಕೊಟ್ಟ ಪತ್ನಿಯರು!

ದಾವಣಗೆರೆ : ಪತ್ನಿಯರಿಗೆ ದೋಖಾ ಮಾಡಿದವನಿಗೆ ಗೂಸಾ ಬಿದ್ದಿರುವ ಘಟನೆ ದಾವಣಗೆರೆ ಎಸ್ಪಿ ಕಚೇರಿ ಎದುರು ನಡೆದಿದೆ.

ಒಬ್ಬರಿಗೆ ಗೊತ್ತಾಗದಂತೆ ಮತ್ತೊಬ್ಬರನ್ನು ಮದುವೆಯಾಗಿದ್ದಾನೆ. ನಾಲ್ಕು ಮದುವೆಯಾಗಿ ವಂಚಿಸಿದವನಿಗೆ ಇಬ್ಬರು ಪತ್ನಿಯರಿಂದ ಗೂಸಾ ಬಿದ್ದಿದೆ. ವಾಸೀಮ್ ಜಾಫರ್ ಆಲಿಯಾಸ್ ಸಲ್ಮಾನ್ ಎಂಬಾತನ ಮೇಲೆ ಪತ್ನಿಯರು ಹಲ್ಲೆ ಮಾಡಿದ್ದಾರೆ.

ಮದುವೆ ಮಾಡಿಕೊಂಡು ಹಣ, ಆಸ್ತಿ ವಂಚನೆ ಮಾಡುತ್ತಿದ್ದ. ಸುಳ್ಳುಗಳನ್ನು ಹೇಳಿ ನಾಲ್ಕು ಮದುವೆ ಮಾಡಿಕೊಂಡಿದ್ದಾನೆಂದು ಹಲ್ಲೆ ಮಾಡಿದ್ದಾರೆ. ಎಸ್​ಪಿ ಕಚೇರಿ ಮುಂಭಾಗವೇ ಚಪ್ಪಲಿಯಿಂದ ಹೊಡೆದಿದ್ದಾರೆ. ಮತ್ತಿಬ್ಬರು ಮಹಿಳೆಯರಿಂದಲೂ ಹಣ ವಂಚನೆ ಆರೋಪ ಕೇಳಿಬಂದಿದೆ.

ಜಾಫರ್ ಸಂಘಟನೆಯೊಂದರ ಮುಖಂಡನಾಗಿ ಸಮಾಜ ಸೇವೆ ಹೆಸರಿನಲ್ಲಿ ವಂಚಿಸುತ್ತಿದ್ದ ಎಂದು ದೂರಲಾಗಿದೆ. ಈ ಸಂಬಂಧ ದಾವಣಗೆರೆ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES