Wednesday, December 25, 2024

ಶಕ್ತಿ ಯೋಜನೆಗೆ SC-ST ಹಣ ಬಳಕೆ : ಕಾರಜೋಳ ಕಿಡಿ

ಬೆಂಗಳೂರು : ಬಸ್​ಗಳಲ್ಲಿ ಉಚಿತ ಪ್ರಯಾಣ ಮಾಡೋರ ಟಿಕೆಟ್​ಗೆ ಎಸ್ಸಿ-ಎಸ್ಟಿ ದುಡ್ಡು ಬಳಕೆ‌ ಆಗ್ತಿದೆ. ಉಚಿತ ವಿದ್ಯುತ್ ಕೊಡ್ತೀವಿ ಅಂತ ಅದಕ್ಕೂ ಎಸ್ಸಿ-ಎಸ್ಟಿ ಹಣ ಬಳಕೆ ಮಾಡ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕಿಡಿಕಾರಿದ್ದಾರೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಹೆಚ್.ಸಿ. ಮಹದೇವಪ್ಪ ಹೋರಾಟಗಾರರು. ಅವರು ಎಸ್ಸಿ-ಎಸ್ಟಿ (SC/ST) ಹಣ ಬೇರೆ ಉದ್ದೇಶಕ್ಕೆ ಬಳಸೋದನ್ನು ಒಪ್ಪಿಕೊಳ್ಳಬಾರದು. ಮಹದೇವಪ್ಪನವರು ದಲಿತರ ಕಲ್ಯಾಣ ನಿಧಿ ಬೇರೆ ಕಡೆ ಬಳಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಗ್ಯಾರಂಟಿಗಳಿಗೆ ಬಳಕೆ ಮಾಡ್ತಿದೆ

ಈ ಸರ್ಕಾರ ಎಸ್‌ಸಿಎಸ್‌ಪಿ-ಟಿಎಸ್‌ಪಿ ಯೋಜನೆಯ 11 ಸಾವಿರ ಕೋಟಿ ದುಡ್ಡನ್ನು ಉಚಿತ ಗ್ಯಾರಂಟಿಗಳಿಗೆ ಬಳಕೆ ಮಾಡ್ತಿದೆ. ದಲಿತ ಸಮುದಾಯದ ಕಲ್ಯಾಣಕ್ಕೆ ಇರುವ ಹಣ ಗ್ಯಾರಂಟಿಗಳಿಗೆ ಬಳಸ್ತಿದ್ದಾರೆ. ಹಾಸ್ಟೆಲ್, ವಸತಿ ಶಾಲೆಗಳಿಗೆ ಈ ಯೋಜನೆಯಡಿ ಸರ್ಕಾರ ಅನುದಾನ ಇಟ್ಟಿಲ್ಲ. ವಸತಿ ಶಾಲೆಗಳು, ಹಾಸ್ಟೆಲ್​ಗಳ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

RELATED ARTICLES

Related Articles

TRENDING ARTICLES