Wednesday, January 22, 2025

‘ಉಪ್ಪಿ ಫ್ಯಾನ್ಸ್’​ಗೆ ಗುಡ್ ನ್ಯೂಸ್ : ಎಡಿಟಿಂಗ್ ಟೇಬಲ್ ಸೇರಿದ ‘ಯುಐ’

ಬೆಂಗಳೂರು : ಉಪ್ಪಿ-2 ಬಳಿಕ ಉಪೇಂದ್ರ ನಟಿಸಿ, ನಿರ್ದೇಶಿಸುತ್ತಿರುವ ಬಹು ನಿರೀಕ್ಷಿತ ಚಿತ್ರ ಯು & ಐ. ಇದೀಗ ಎಡಿಟಿಂಗ್ ಟೇಬಲ್ ಸೇರಿದ್ದು, ಉಪ್ಪಿಯ ಆಕ್ಷನ್ ಕಟ್ ಜೊತೆ ರಿಯಲ್ ಕಟ್ ಹೇಗಿರಲಿದೆ ಎಂಬ ಕೌತುಕತೆ ಹೆಚ್ಚಿದೆ.

‘ಉಪ್ಪಿ’ಗಿಂತ ರುಚಿ ಬೇರೆ ಇಲ್ಲ. ಉಪೇಂದ್ರ ಬಹಳ ವರ್ಷಗಳ ಹಿಂದೆಯೇ ತಾನೇನು, ತನ್ನ ಸಿನಿಮಾಗಳ ಕಂಟೆಂಟ್ ಏನು ಅನ್ನೋದನ್ನು ಜನರಿಗೆ ಅರ್ಥೈಸಿದ್ದರು. ಅದರಲ್ಲೂ ಬುದ್ಧಿವಂತರಿಗೆ ಮಾತ್ರ ಅಂತ ಹುಳ ಕೂಡ ಬಿಡ್ತಿದ್ರು. ನಟನೆ, ನಿರ್ದೇಶನ, ಬರವಣಿಗೆ, ಗಾಯನ, ನಿರ್ಮಾಣ ಸೇರಿದಂತೆ ಚಿತ್ರರಂಗದ ಬೇರೆ ಬೇರೆ ಆಯಾಮಗಳಲ್ಲಿ ಉಪ್ಪಿ ಟ್ರೆಂಡ್ ಸೆಟ್ ಮಾಡಿದ್ದಾರೆ.

ಉಪ್ಪಿ-2 ಚಿತ್ರದ ಬಳಿಕ ನಿರ್ದೇಶನನಿಂದ ಕೊಂಚ ಗ್ಯಾಪ್ ಪಡೆದಿದ್ದರು. ಇದೀಗ ಅಭಿಮಾನಿಗಳ ಒತ್ತಾಸೆ ಹಾಗೂ ಚಿತ್ರರಂಗದ ಹಿತದೃಷ್ಟಿಯಿಂದ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ. ಯು & ಐ. ನಾನು, ನೀನು ಕಾನ್ಸೆಪ್ಟ್​​ಗಳನ್ನು ಈ ಹಿಂದೆಯೇ ಜನರ ಮುಂದೆ ತಂದಿದ್ದ ಉಪ್ಪಿ, ಈ ಬಾರಿ ನೀನು ನಾನು ಇಬ್ಬರನ್ನೂ ಒಟ್ಟೊಟ್ಟಿಗೆ ತರ್ತಿದ್ದಾರೆ.

ಎಡಿಟಿಂಗ್ ಟೇಬಲ್​​ಗೆ ಕೂತಿರುವ ಉಪ್ಪಿ

ಸದ್ಯ ಶೂಟಿಂಗ್ ಮುಗಿಸಿರೋ ಉಪೇಂದ್ರ, ಒಂದೇ ಒಂದು ಸ್ಪೆಷಲ್ ಸಾಂಗ್​ನ ಚಿತ್ರಿಸೋದು ಬಾಕಿ ಉಳಿಸಿದ್ದಾರಂತೆ. ಅದಕ್ಕೂ ಮುನ್ನ ಎಡಿಟಿಂಗ್ ಟೇಬಲ್​ಗೆ ಕೂತಿರುವ ಉಪ್ಪಿ, ಸಂಕಲನಕಾರ ದೀಪು ಎಸ್ ಕುಮಾರ್ ಜೊತೆಗೂಡಿ ರಿಯಲ್ ಕಟ್​ಗೆ ಕೈ ಹಾಕಿದ್ದಾರೆ. ವಿಶೇಷ ಅಂದ್ರೆ ಅಮೆರಿಕಾದ ಟಾಪ್ ಮೋಸ್ಟ್ ಟೆಕ್ನಿಷಿಯನ್ಸ್ ಯುಐ ಸಿನಿಮಾದ ವಿಎಫ್​ಎಕ್ಸ್ ಕಾರ್ಯಗಳನ್ನು ಮಾಡ್ತಿದ್ದಾರೆ. ರೇಡಿಯೆನ್ಸ್ ಕಂಪೆನಿಯಲ್ಲಿ ಸ್ಪೆಷಲ್ ಎಫೆಕ್ಟ್ಸ್ ವರ್ಕ್​ ಭರದಿಂದ ಸಾಗ್ತಿದ್ದು, ನಿರ್ಮಲ್ ಲಹರಿ ಸಂಸ್ಥೆಯ ಮನೋಹರ್ ನಾಯ್ಡು ಪುತ್ರ ನವೀನ್ ಅವರೇ ಇದ್ರ ಜವಾಬ್ದಾರಿ ಹೊತ್ತು ಮಾಡಿಸ್ತಿರೋದು ಇಂಟರೆಸ್ಟಿಂಗ್.

ಮೂರು ಮಂದಿಯ ಕ್ಯಾಮೆರಾ ಕೈಚಳಕ

ಟಗರು, ಸಲಗ ಸಿನಿಮಾಗಳ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಲಹರಿ ಸಂಸ್ಥೆಯ ಮನೋಹರ್ ನಾಯ್ಡು ಜೊತೆಗೂಡಿ ಯುಐ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ. ಕೆಜಿಎಫ್ ಖ್ಯಾತಿಯ ಆರ್ಟ್​ ಡೈರೆಕ್ಟರ್ ಶಿವಕುಮಾರ್ ಜೊತೆ ಬಿಗ್ ಸ್ಕೇಲ್ ಸಿನಿಮಾನ ಮೂರು ಮಂದಿ ಸಿನಿಮಾಟೋಗ್ರಾಫರ್ಸ್​ ಹ್ಯಾಂಡಲ್ ಮಾಡಿದ್ದಾರೆ. ಪ್ರಜ್ವಲ್, AJ ಹಾಗೂ ವೇಣು ಹೀಗೆ ಮೂರು ಮಂದಿಯ ಕ್ಯಾಮೆರಾ ಕೈಚಳಕ ಈ ಚಿತ್ರಕ್ಕಿದೆ.

ಒಟ್ಟಾರೆ, ಟೆಕ್ನಿಕಲಿ ಸಖತ್ ಸ್ಟ್ರಾಂಗ್ ಇರೋ ಯುಐ ಸಿನಿಮಾ, ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯೋ ಮುನ್ಸೂಚನೆ ನೀಡಿದೆ.

  • ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES