Wednesday, January 22, 2025

ಭೀಕರ ಅಪಘಾತ : ಕ್ಯಾಂಟರ್ ಹರಿದು ಇಬ್ಬರು ಕೂಲಿ ಕಾರ್ಮಿಕರು ಸಾವು

ಬೆಂಗಳೂರು : ಆನೇಕಲ್ ತಾಲೂಕಿಗೆ ಕರಾಳ ಮಂಗಳವಾರವಾಗಿದೆ. ಟ್ಯಾಂಕರ್ ವಾಹನ ಹರಿದು ಇಬ್ಬರು ಪಾದಾಚಾರಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ಈ ದಾರುಣ ಘಟನೆ ನಡೆದಿದೆ. ಎಣ್ಣೆ ಏಟಿನಲ್ಲೇ ಚಾಲಕ ಟ್ಯಾಂಕರ್ ವಾಹನವನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿ ಪಾದಾಚಾರಿಗಳಿಗೆ ಡಿಕ್ಕಿ ಹೊಡೆದಿದ್ದಾನೆ.

ಮನೋಜ್ ಕುಮಾರ್ ಮತ್ತು ಆದೀಶ್ ಮೃತರು ಎಂದು ತಿಳಿದುಬಂದಿದೆ. ಇಬ್ಬರು ಹೊಟ್ಟೆಪಾಡಿಗಾಗಿ ಬಿಹಾರ ಮತ್ತು ತಮಿಳುನಾಡಿನಿಂದ ಕೂಲಿ ಕಾರ್ಮಿಕರು ಬಂದಿದ್ದರು. ಫ್ರೂಟ್ ಮಾರ್ಕೆಟ್​ನಿಂದ ಹಣ್ಣು ಲೋಡ್ ಮಾಡಿಕೊಂಡು ಅತೀ ವೇಗವಾಗಿ ಕ್ಯಾಂಟರ್ ಬಂದಿದೆ. ನಿಯಂತ್ರಣ ಕಳೆದುಕೊಂಡು ಪಾದಾಚಾರಿಗಳಿಗೆ ಡಿಕ್ಕಿ ಹೊಡೆದಿದೆ. ಚಾಲಕನನ್ನು ಹೆಬ್ಬಗೋಡಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

RELATED ARTICLES

Related Articles

TRENDING ARTICLES