Wednesday, January 22, 2025

ಶಕ್ತಿ ಯೋಜನೆ ಎಫೆಕ್ಟ್ : ಆಟೋದಲ್ಲಿ ವಿದ್ಯಾರ್ಥಿಗಳ ಡೆಂಜರ್ ಜರ್ನಿ!

ಯಾದಗಿರಿ : ಒಂದೇ ಆಟೋದಲ್ಲಿ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣ ಮಾಡಿರುವ ಆಘಾತಕಾರಿ ಘಟನೆ ಯಾದಗಿರಿಯಲ್ಲಿ ಕಂಡುಬಂದಿದೆ.

ನಗರದ ತಹಶೀಲ್ದಾರ್​​​ ಕಚೇರಿ ಬಳಿ ಈ ದೃಶ್ಯ ಕಂಡುಬಂದಿದೆ. ಶಕ್ತಿ ಯೋಜನೆ ಎಫೆಕ್ಟ್​ನಿಂದ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಕುರಿ ತುಂಬಿದ ಹಾಗೆ ವಿದ್ಯಾರ್ಥಿಗಳನ್ನು ಆಟೋದಲ್ಲಿ ಚಾಲಕ‌ ತುಂಬಿದ್ದಾನೆ.

ವಿಧಿಯಿಲ್ಲದೇ ಆಟೋದ ಬಾಗಿಲು, ಟಾಪ್ ಮೇಲೆ ಕುಳಿತು, ವಿದ್ಯಾರ್ಥಿಗಳು ಪ್ರಯಾಣ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಡೆಂಜರ್ ಜರ್ನಿ ವಿಡಿಯೋ ಸ್ಥಳೀಯರ ಮೊಬೈಲ್​​​ನಲ್ಲಿ ಸೆರೆಯಾಗಿದೆ. ಆಟೋ ಚಾಲಕನ ವಿರುದ್ದ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಇತ್ತೀಚೆಗೆ, ಬಸ್ ಡೋರ್‌ನ ಹೊರಗಡೆ ಒಂದೇ ಕೈ ಹಿಡಿದು ಅಪಾಯದಲ್ಲೇ ವಿದ್ಯಾರ್ಥಿಗಳು ಪ್ರಯಾಣ ಮಾಡಿದ ಆಘಾತಕಾರಿ ಘಟನೆ ಯಾದಗಿರಿಯಲ್ಲಿಯೇ ಕಂಡುಬಂದಿತ್ತು.

RELATED ARTICLES

Related Articles

TRENDING ARTICLES