ಯಾದಗಿರಿ : ಧುಮ್ಮಿಕ್ಕಿ ಹರಿಯುತ್ತಿರೋ ಫಾಲ್ಸ್ಗಿಳಿದು ಯುವಕರು ಹುಚ್ಚಾಟವಾಡುತ್ತಿರೋ ಘಟನೆ ಯಾದಗಿರಿ ತಾಲೂಕಿನ ಕೊಟಗೇರಾ ಗ್ರಾಮದ ಹೊರವಲಯದಲ್ಲಿರುವ ಸೂರಗ್ ಮಿನಿ ಫಾಲ್ಸ್ನಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಯುವಕ ಶರತ್ ಸಾವು ನಡೆದ್ರೂ ಯುವಕರು ಎಚ್ಚೆತ್ತುಕೊಳ್ಳುತ್ತಿಲ್ಲ. ಪ್ರಾಣದ ಹಂಗು ತೊರೆದು ಪೋಟೋ ಕ್ರೇಜ್ಗಾಗಿ ಮಿನಿ ಫಾಲ್ಸ್ ಆಳಕ್ಕೆ ಇಳಿಯುತ್ತಿದ್ದಾರೆ.
ಸತತ ಮಳೆಯಿಂದಾಗಿ ಸೂರಗ್ ಮಿನಿ ಫಾಲ್ಸ್ ಮೈದುಂಬಿ ಹರಿಯುತ್ತಿದ್ದು, ಮಿನಿ ಫಾಲ್ಸ್ನ ರಮಣೀಯ ನಿಸರ್ಗ ಸೌಂದರ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರು ಬರುತ್ತಿದ್ದಾರೆ. ಬಂಡೆಗಳ ಮೇಲೆ ನೀರು ಹರಿಯುತ್ತಿರೋದ್ರಿಂದ ಪಾಚಿಗಟ್ಟಿದೆ. ಪೋಟೋ ಪೋಸ್ಗಾಗಿ ಬಂಡೆಗಳ ಮೇಲಿಂದ ಕೆಳಗಿಳಿದು ದುಸ್ಸಾಹಸಕ್ಕೆ ಮುಂದಾಗಿದ್ದಾರೆ. ಸ್ವಲ್ಪ ಯಾಮಾರಿದ್ರೂ ಕಾಲು ಜಾರಿ ಅನಾಹುತ ಸಂಭವಿಸೋ ಸಾಧ್ಯತೆಯಿದೆ.
ಯುವಕನ ಮೃತದೇಹ ಪತ್ತೆ
ಜಲಪಾತ ವೀಕ್ಷಣೆ ವೇಳೆ ರೀಲ್ಸ್ ಮಾಡಲು ಹೋಗಿ ಜಲಪಾತಕ್ಕೆ ಬಿದ್ದು, ಕೊಚ್ಚಿ ಹೋಗಿದ್ದ ಯುವಕ ಶರತ್ (23) ಮೃತದೇಹ ಪತ್ತೆಯಾಗಿದೆ. 5 ದಿನಗಳ ನಿರಂತರ ಶೋಧಕಾರ್ಯದ ಬಳಿಕ ಮೃತದೇಹ ಪತ್ತೆಯಾಗಿದೆ. ಕೊಲ್ಲೂರಿನ ಅರಿಶಿನ ಗುಂಡಿ ಜಲಪಾತದ ಬಳಿ ಸ್ನೇಹಿತನೊಂದಿಗೆ ರೀಲ್ಸ್ ಮಾಡಲು ಹೋಗಿದ್ದ ಭದ್ರಾವತಿ ಮೂಲದ ಶರತ್ ಕುಮಾರ್ ಕಾಲು ಜಾರಿ ಜಲಪಾತಕ್ಕೆ ಬಿದ್ದಿದ್ದ.