ಬೆಂಗಳೂರು : ತಿರುಪತಿ ಲಡ್ಡುವಿಗೆ ನಂದಿನಿ ತುಪ್ಪ ಸ್ಥಗಿತ ವಿಚಾರ ಕುರಿತು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2005 ರಿಂದ 2020 ರವರೆಗೂ ನಂದಿನಿ ತುಪ್ಪ ಸರಬರಾಜು ಮಾಡಲಾಗಿತ್ತು. ಟಿಟಿಡಿ ಆರು ತಿಂಗಳಿಗೊಮ್ಮೆ 1700 ರಿಂದ 2000 ಮೆಟ್ರಿಕ್ ಟನ್ ತುಪ್ಪಕ್ಕೆ ಟೆಂಡರ್ ಕರೆಯುತ್ತಾರೆ. 2020ರಲ್ಲೇ ದರದ ವ್ಯತ್ಯಾಸದಲ್ಲಿ ಕೆಎಂಎಫ್ ಕೈ ಬಿಡಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
2020 ರಿಂದ ಬೇರೆಯವರಿಗೆ ಟೆಂಡರ್ ಆಗಿತ್ತು. ಆಗಿದ್ದರೂ ಸಹ 2021-2022 ರಲ್ಲಿ ಪತ್ರ ಬರೆದು ಬೇಡಿಕೆ ಇಟ್ಟಿದ್ದರು. ಆಗ ತಿರುಪತಿಗೆ 345 ಮೆಟ್ರಿಕ್ ಟನ್ ನಂದಿನಿ ತುಪ್ಪ ಸಪ್ಲೈ ಮಾಡಿದ್ದೆವು. ತಿರುಪತಿಗೆ ನಂದಿನಿ ತುಪ್ಪ ಈಗ ಸ್ಥಗಿತಗೊಂಡಿಲ್ಲ. ಟಿಟಿಡಿ ಟೆಂಡರ್ನಲ್ಲಿ ಪ್ರತಿ ಬಾರಿಯೂ ಭಾಗವಹಿಸುತ್ತೇವೆ ಎಂದು ಭೀಮಾ ನಾಯ್ಕ್ ಸ್ಪಷ್ಟನೆ ನೀಡಿದ್ದಾರೆ.