Monday, December 23, 2024

ದೇವಸ್ಥಾನ ಕೆಡವೋದು ಇಲ್ಲಿಗೆ ಸ್ಟಾಪ್ ಆಗ್ಬೇಕು : ಉದಯ ಗರುಡಚಾರ್

ಬೆಂಗಳೂರು : ದೇವಸ್ಥಾನದ ಗೋಡೆ ಡೆಮಾಲಿಷನ್ ವಿಚಾರ ಸಂಬಂಧ ಸ್ಥಳಕ್ಕೆ ಶಾಸಕ ಉದಯ ಗರುಡಚಾರ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ನನಗೆ ನಮ್ಮ ಕಾರ್ಯಕರ್ತರು ಕಾಲ್ ಮಾಡಿ ವಿಷಯ ತಿಳಿಸಿದರು. ಇದು ತುಂಬಾ ವರ್ಷಗಳಿಂದ ಇದ್ದ ದೇವಸ್ಥಾನ. ಈ ತರ ಮಾಡೋದು ದೊಡ್ಡ ತಪ್ಪು ಎಂದು ಹೇಳಿದ್ದಾರೆ.

ಏನೇ ಮಾಡ್ಬೇಕು ಅಂದ್ರೂ ಅದಕ್ಕೊಂದು ಪದ್ಧತಿ ಇದೆ. ಇದು ಇಲ್ಲಿಗೆ ಮುಗಿಬೇಕು. ಅಧಿಕೃತವಾಗಿ ಈ ಕಾರ್ಯ ನಡೆದಿಲ್ಲ. ಕರ್ನಾಟಕ ಒಂದು ಶಾಂತಿಯ ತೋಟ. ನನ್ನ ಕ್ಷೇತ್ರದಲ್ಲಿ ಈ ತರ ಆದ್ರೆ ನಾನು ಸುಮ್ನೆ ಇರೋದಿಲ್ಲ. ಯಾರೇ ಆಗಿರ್ಲಿ, ನಾನು ಎಫ್​ಐಆರ್ (FIR) ಹಾಕಲು ಹೇಳಿ ಅವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಹೇಳ್ತೀನಿ ಎಂದು ತಿಳಿಸಿದ್ದಾರೆ.

ದೇವಸ್ಥಾನ ಕೆಡವಿದ ಬಿಬಿಎಂಪಿ

ನೂರಾರು ವರ್ಷಗಳ ಇತಿಹಾಸವಿರೋ ಬೆಂಗಳೂರಿನ ಐತಿಹಾಸಿಕ ದೇವಾಲಯಕ್ಕೆ ಹಾನಿ ಮಾಡಿ ಬಿಬಿಎಂಪಿ (BBMP) ಅಧಿಕಾರಿಗಳು ಮಹಾ ಎಡವಟ್ಟು ಮಾಡಿದ್ದಾರೆ. ಎಸ್​.ಪಿ. ರಸ್ತೆಯಲ್ಲಿರುವ ಐತಿಹಾಸಿಕ ಗಂಗಾಧರೇಶ್ವರ ದೇವಸ್ಥಾನವನ್ನು ಬಿಬಿಎಂಪಿ ಅಧಿಕಾರಿಗಳು ಕೆಡವಿದ್ದಾರೆ.

ಫುಟ್​​ಪಾತ್ ತೆರವು ನೆಪದಲ್ಲಿ ದೇವಾಲಯವನ್ನು ಧ್ವಂಸ ಮಾಡಿದ್ದಾರೆ. ಕೆಂಪೇಗೌಡರ ಕಾಲದ ಐತಿಹಾಸಿಕ ದೇಗುಲವನ್ನು ಅಧಿಕಾರಿಗಳು ಕೆಡವಿದ್ದಾರೆ. ಅಧಿಕಾರಿಗಳು, ಜೆಸಿಬಿ ಸಿಬ್ಬಂದಿಯ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರಸ್ತೆ ಅಭಿವೃದ್ಧಿ ಹೆಸರಲ್ಲಿ ದೇವಾಲಯ ಕೆಡವಿದ್ದಾರೆ.

RELATED ARTICLES

Related Articles

TRENDING ARTICLES