Monday, December 23, 2024

ಯಾರಿಗೆ ಬೇಕಾದರೂ ರಾಜ್ಯಾಧ್ಯಕ್ಷ ಸ್ಥಾನ ಕೊಡಲಿ : ಸಿ.ಟಿ. ರವಿ

ಬೆಂಗಳೂರು : ದೆಹಲಿಯ ನನ್ನ ಕಚೇರಿಯನ್ನು ಮುಚ್ಚಿದ್ದೇನೆ. ಹೀಗಾಗಿ, ಸಿಬ್ಬಂದಿಗೆ ಧನ್ಯವಾದ ತಿಳಿಸಲು ಹೋಗುತ್ತಿದ್ದೇ‌ನೆ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ.

ದೆಹಲಿಗೆ ತೆರಳುವ ಮುನ್ನ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ಸಹೋದ್ಯೋಗಿಗಳನ್ನು ಭೇಟಿಯಾಗಿ ಮೂರು ನಾಲ್ಕು ದಿನಗಳಲ್ಲಿ ಬರುತ್ತೇನೆ. ಯಾರಿಗೆ ಬೇಕಾದರೂ ರಾಜ್ಯಾಧ್ಯಕ್ಷ ಸ್ಥಾನ ಕೊಡಲಿ ನಮ್ಮದೇನು ತಕರಾರಿಲ್ಲ. ಯಾವಾಗ ಮಾಡುತ್ತಾರೆ ಅನ್ನೂದು ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ರವಿಗೆ ‘ಹೈ’ ತುರ್ತು ಬುಲಾವ್​

ಬಿಜೆಪಿ ಹೈಕಮಾಂಡ್ ಸಿ.ಟಿ. ರವಿ ಅವರಿಗೆ ತುರ್ತು ಬುಲಾವ್​ ನೀಡಿದೆ. ಹೀಗಾಗಿ, ಅವರು ಬೆಂಗಳೂರಿನಿಂದ ದೆಹಲಿಗೆ ತೆರಳಿದ್ದಾರೆ. ಎರಡು ದಿನಗಳ ಹಿಂದಷ್ಟೇ ಅವರು ದೆಹಲಿಗೆ ತೆರಳಿದ್ದರು. ಇದೀಗ ಮತ್ತೆ ದೆಹಲಿ ಪ್ರಯಾಣ ಕೈಗೊಂಡಿದ್ದಾರೆ.

RELATED ARTICLES

Related Articles

TRENDING ARTICLES