Wednesday, December 25, 2024

ದಲಿತರಿಗೆ ಅಕ್ಕಿ, ಕೋಳಿ, ಬೇಳೆ ಬೇಕಾಗಿಲ್ಲ : ಗೋವಿಂದ ಕಾರಜೋಳ

ಬೆಂಗಳೂರು : ದಲಿತರಿಗೆ ಅಕ್ಕಿ, ಕೋಳಿ, ಬೇಳೆ ಬೇಕಾಗಿಲ್ಲ. ದಲಿತರಿಗೆ ಶಿಕ್ಷಣ ಕೊಡಿ ಎಂದು ಕಾಂಗ್ರೆಸ್​ ವಿರುದ್ಧ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ದಲಿತರಿಗೆ ಮೂಲಭೂತ ಸೌಕರ್ಯ ಕೊಡಿ. ಆರೋಗ್ಯ ಕೋಡಿ. ಸಿದ್ದರಾಮಯ್ಯರ ಅಕ್ಕಿ, ಕೋಳಿ, ಬೇಳೆ ಬೇಡ. ನಿಮ್ಮ ಮುಂದೆ ದಲಿತರು ಅಕ್ಕಿ ಕೊಡಿ ಅಂತ ಕೈವೊಡ್ಡಿ ನಿಲ್ಲಬೇಕಾ? ಎಂದು ಗುಡುಗಿದ್ದಾರೆ.

ದಲಿತರಿಗೆ ಅಂಗೈ ಅಗಲ ಸ್ಮಶಾನ ಇಲ್ಲ. ಮೊನ್ನೆ ಮನೆ ಮುಂದೆ ಶವ ಸಂಸ್ಕಾರ ಮಾಡ್ತಾ ಇದ್ದ ಸುದ್ದಿ ಮಾಧ್ಯಮದವರೇ ತೋರಿಸಿದ್ದಾರೆ. ದಲಿತರಿಗೆ ಸ್ಪೆಷಲ್ ಕಾರ್ಯಕ್ರಮ ಕೊಡಿ. ನೀವು ಈಗ ಘೋಷಣೆ ಮಾಡಿರುವ ಐದು ಗ್ಯಾರಂಟಿ ಸ್ಪೆಷಲ್ ಕಾರ್ಯಕ್ರಮ ಅಲ್ಲ. ದಲಿತರ ಉದ್ಧಾರಕ್ಕಾಗಿ ಇಟ್ಟ ಹಣ ಇದಕ್ಕೆ ಬಳಸಿಕೊಳ್ಳಬೇಡಿ ಎಂದು ಕಿಡಿಕಾರಿದ್ದಾರೆ.

ಸೂಕ್ತ ಪರಿಹಾರಕ್ಕೆ ಆಗ್ರಹ

ಬಿಜೆಪಿಯಿಂದ ಇನ್ನೂವರೆಗೂ ಮಳೆ ಹಾನಿ ಅಧ್ಯಯನ ಪ್ರವಾಸ ಮಾಡದ ವಿಚಾರವಾಗಿ ಮಾತನಾಡಿ, ರಾಜ್ಯದಲ್ಲಿ ಇನ್ನೂ ಮಳೆ ಆಗ್ತಿದೆ. ಮಳೆ ನಿಂತ ಮೇಲೆ ನಾವು ತಂಡಗಳಾಗಿ ಪ್ರವಾಸ ಮಾಡ್ತೇವೆ. ನಾಲ್ಕು ಕಂದಾಯ ವಿಭಾಗಗಳಲ್ಲೂ ಪ್ರವಾಸ ಮಾಡ್ತೀವಿ. ಸಂತ್ರಸ್ತರಿಗೆ ಸೂಕ್ತ ಪರಿಹಾರಕ್ಕೆ ಆಗ್ರಹ ಮಾಡ್ತೇವೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES