ಬೆಂಗಳೂರು : ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈ ಓವರ್ ಮೇಲೆ ಮಧ್ಯರಾತ್ರಿ ಕೆಲವರು ಕುಡಿದು ಕುಪ್ಪಳಿಸಿ ಪಾರ್ಟಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋ ವೈರಲ್ ಆದ ಬಳಿಕ ಪ್ರಯಾಣಿಕರ ಸುರಕ್ಷತೆ ಮತ್ತು ಪೊಲೀಸರಿಂದ ಹೆಚ್ಚಿನ ರಾತ್ರಿ ಗಸ್ತು ಅಗತ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದು ರಾತ್ರಿ ಗಸ್ತಿಗೆ ಪೊಲೀಸರು ಮುಂದಾಗಿದ್ದಾರೆ.
ಪಾರ್ಟಿ ಮಾಡಲು ಫ್ಲೈ ಓವರ್ ಮೇಲೆ ಬಂದಿದ್ದವರು ತಮ್ಮ ಕಾರನ್ನು ಸೈಡಿಗೆ ಹಾಕಿ ರಸ್ತೆಯಲ್ಲಿ ಮೋಜು ಮಸ್ತಿ ಮಾಡಿದ್ದಾರೆ. ಅಲ್ಲದೆ ಮದ್ಯದ ಬಾಟಲಿಗಳು, ತಿಂಡಿ ಪ್ಯಾಕ್‌ಗಳು ಮತ್ತು ಇತರ ವಸ್ತುಗಳನ್ನು ಅಲ್ಲೇ ಬಿಸಾಡಿ ತೆರಳಿದ್ದಾರೆ. ಇಲ್ಲಿ ಸುಮಾರು 10 ಕಿ.ಮೀ ಎಕ್ಸ್‌ಪ್ರೆಸ್‌ವೇನಲ್ಲಿ ವಾಹನಗಳು ಗರಿಷ್ಠ ವೇಗದಲ್ಲಿ ಚಲಿಸುತ್ತವೆ.
ಸೆಪ್ಟೆಂಬರ್ 2021ರಲ್ಲಿ ಯುವಕ-ಯುವತಿ ತಮ್ಮ ಬೈಕನ್ನು ಸೈಡಿಗೆ ನಿಲ್ಲಿಸಿ ಇದೇ ಫ್ಲೈ ಓವರ್ ಮೇಲೆ ನಿಂತಿದ್ದಾಗ ಅವರ ಮೇಲೆ ಕಾರು ಹರಿದ ಘಟನೆ ನಡೆದಿತ್ತು. ಆದರೆ, ಈಗ ಫ್ಲೈ ಓವರ್ ಮೇಲೆ ಪಾರ್ಟಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರು ಪೊಲೀಸರ ಮೇಲೆ ಕಿಡಿಕಾರಿದ್ದಾರೆ. ಬೆಂಗಳೂರು ಪೊಲೀಸ್ ಅಧಿಕಾರಿಗಳನ್ನು ಟ್ಯಾಗ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.