Wednesday, January 22, 2025

ತರಳಬಾಳು ಮಠದಿಂದ ‘ಬಸವಣ್ಣನವರ ವಚನ ಸಂಸ್ಕೃತಿ’ ಅಭಿಯಾನ

ಬೆಂಗಳೂರು : ವಿಶ್ವ ಮಾನವ ಬಣವಣ್ಙನವರ ತತ್ವ ಸಿದ್ಧಾಂತಗಳನ್ನು ಇಡೀ ದೇಶಕ್ಕೆ ಸಾರಲು ಚಿತ್ರದುರ್ಗದ ಜಿಲ್ಲೆಯ ತರಳಬಾಳು ಶಾಖಾಮಠ ಸಾಣೇಹಳ್ಳಿ ಮುಂದಾಗಿದೆ.

‘ತುಮ್ಹಾರೇ ಸಿವಾ ಔರ್ ಕೋಯಿ ನಹೀ’ ಅಡಿಬರಹದಲ್ಲಿ ಸುಮಾರು ಎರಡು ತಿಂಗಳ ಕಾಲ ಇಡೀ ದೇಶವನ್ನು ಸುತ್ತಿ, ಬಸವಣ್ಣನವರ ವಚನಗಳನ್ನು ಹಿಂದಿಗೆ ಅನುವಾದಿಸಿಕೊಂಡು ಉತ್ತರ ಭಾರತದ ಎಲ್ಲಾ ರಾಜ್ಯಗಳಲ್ಲಿ ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಪಸರಿಸುತ್ತಿದೆ.

ಮೊದಲ ಸಂಸತ್ ಅನುಭವ ಮಂಟಪದಿಂದ ಹಿಡಿದು, ಇಡೀ ವಿಶ್ವದಾದ್ಯಂತ ಬಸವಣ್ಣನವರು ಗುರುತಿಸಿಕೊಂಡಿದ್ದಾರೆ. ಆದ್ರೆ, ಅವರ ವಚನಗಳು ಕೂಡ ಅದೇ ರೀತಿ ಇಡಿ ದೇಶಕ್ಕೆ ತಲುಪಬೇಕೆಂಬ ಉದ್ದೇಶದಿಂದ ಈ ಪ್ರಯತ್ನ ನಡೆಸಲಾಗಿದೆ.

44 ವಚನಗಳಿಗೆ ನೃತ್ಯ ಸಂಯೋಜನೆ

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ, ರಂಗಕರ್ಮಿ ಶ್ರೀನಿವಾಸ್ ಜಿ. ಕಪ್ಪಣ್ಣ ಅವರ ಪರಿಕಲ್ಪನೆ ಮತ್ತು ಬಣವಣ್ಣನವರ ಆಯ್ದ 44 ವಚನಗಳಿಗೆ ನೃತ್ಯ ಸಂಯೋಜನೆಯನ್ನು ನಿರ್ದೇಶಕಿ ಸ್ನೇಹ  ಕಪ್ಪಣ್ಣ ಅವರು, ಮೂವತ್ತು ಕಲಾವಿದರನ್ನು ಆಯ್ಕೆ ಮಾಡಿ ನೃತ್ಯ ನಿರ್ದೇಶನ ಮಾಡುವ ಮೂಲಕ ದೇಶದ ಪ್ರಥಮ ವಚನ ಸಂಸ್ಕೃತಿ ಅಭಿಯಾನ ಆರಂಭಿಸಿದ್ದಾರೆ.

ಈಗಾಗಲೇ ಉತ್ತರ ಪ್ರದೇಶ, ಚಂಡಿಗಡ, ವೈಜಾಕ್, ಒಡಿಸ್ಸಾ, ಕೋಲ್ಕತ್ತಾ, ಬಿಹಾರ, ಹೈದರಾಬಾದ್, ಜಾರ್ಖಂಡ್, ಉತ್ತರ ಖಂಡ್ ಸದ್ಯ ದೆಹಲಿಯಲ್ಲಿ ಈ ತಂಡ  ಅಭಿಯಾನ ಮುಂದುವರೆಸಿದೆ.

RELATED ARTICLES

Related Articles

TRENDING ARTICLES