Tuesday, September 17, 2024

ಅಧಿಕ ಮಾಸದ ಪೌರ್ಣಮಿ: ವಿಶೇಷತೆ ಏನು ಗೊತ್ತಾ ?

ಬೆಂಗಳೂರು: ಅಧಿಕ ಮಾಸದ ಪೌರ್ಣಮಿಯೂ ಚಾಮರ ಯೋಗದಲ್ಲಿ ನಡೆಯುತ್ತಿರುವುದರಿಂದ ಅನೇಕ ಶುಭ ಫಲಗಳನ್ನು ಹಲವು ರಾಶಿಗಳಿಗೆ ನೀಡಲಿದೆ.

ಸಿಂಹ, ತುಲಾ, ಧನುಸ್ಸು, ಮಕರ, ಮೀನ, ವೃಷಭ ರಾಶಿಗಳು ಶುಭಫಲಗಳನ್ನು ಹೊಂದುತ್ತಾರೆ. ಈ ವೇಳೆ ಕರ್ಕ ರಾಶಿಯವರು ಆದಷ್ಟು ಶಿವನ ಆರಾಧನೆ  ಮಾಡುವುದು ಸೂಕ್ತ. ಕುಂಬ ರಾಶಿಯವರು ದುರ್ಗಾರಾಧನೆ ಮಾಡುವುದು ಉತ್ತಮ.

ಕನ್ಯಾ ರಾಶಿಯವರು ಲಕ್ಷ್ಮೀನಾರಾಯಣ ಹೃದಯ ಸ್ತೋತ್ರ ಪಠಣ ಮಾಡುವುದರಿಂದ ಶುಭಫಲ ಪಡೆಯಲಿದ್ದಾರೆ.

ರೈತರು ಇಂದು ಆಂಜನೇಯ ಸ್ವಾಮಿ ಆರಾಧನೆ ಮಾಡಿದಲ್ಲಿ ಉತ್ತಮ ಫಲವನ್ನು ಪಡೆಯಬಹುದು.

ಪ್ರಧಾನ ಮಂತ್ರಿಗಳೇ ಎಚ್ಚರಿಕೆಯಿಂದ ಇರುವುದು ಒಳಿತು, ಮೈಎಲ್ಲಾ ಕಣ್ಣಾಗಿರಬೇಕು, ಕಾಲಜ್ನಾನದ ಪ್ರಕಾರ ಮುಂದಿನ ಆರು ಮತ್ತು ಏಳು ತಿಂಗಳಲ್ಲಿ ಅನೇಕ ದುರ್ಘಟನೆಗಳು ನಡೆಯಲಿದೆ.

ರವಿಯ ಅನುಗ್ರಹದಿಂದ ಬಿಜೆಪಿ ಪಕ್ಷದಲ್ಲಿ ಹಲವು ಬದಲಾವಣೆಗಳು ನಡೆಯಲಿದೆ. ನಾಗರ ಅಮವಾಸ್ಯೆಯಿಂದ ಬಿಜೆಪಿಯು ವಿಶೇಷ ಶಕ್ತಿಯನ್ನು ಪಡೆಯಲಿದೆ.      

 

RELATED ARTICLES

Related Articles

TRENDING ARTICLES