ಬೆಂಗಳೂರು : ಹೊಸಕೋಟೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಟೊಮೆಟೊ ಕದಿಯುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.
ಕೋಲಾರ ಮೂಲದ ಶಿವಾನಂದ, ಆನಂದ್ ಬಂಧಿತ ಆರೋಪಿಗಳು. ಬಂಧಿತರಿಂದ 12 ಟ್ರ್ಯಾಕ್ಟರ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಹೊಸಕೋಟೆಯ ಸುತ್ತಮುತ್ತ ಬೆಳೆದಿದ್ದ ಟೊಮೆಟೊ ಬೆಳೆಗಳನ್ನೇ ಟಾರ್ಗೆಟ್ ಮಾಡಿದ್ದರು. ಆರೋಪಿಗಳು ಕದ್ದ ಟೊಮೆಟೊವನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಕೆಂಪು ಸುಂದರಿ ಮತ್ತಷ್ಟು ದುಬಾರಿ
ರಾಜ್ಯದ ಗೃಹಿಣಿಯರಿಗೆ ಮತ್ತೆ ಟೊಮೆಟೊ ದರ ಶಾಕ್ ನೀಡಿದ್ದು, ಟೊಮೆಟೊ ಬೆಲೆ ಕೆಜಿಗೆ 150 ರೂಪಾಯಿವರೆಗೂ ದೆ. ಏಕಾಏಕಿಯಾಗಿ ದರ ಏರಿಕೆಯಿಂದ ಸಿಟಿ ಮಂದಿ ಕಂಗಲಾಗಿದ್ದಾರೆ. ಪೂರೈಕೆ ಕಡಿಮೆ ಆಗಿರುವ ಹಿನ್ನಲೆ ಮತ್ತೆ ಟೊಮೆಟೊ ದರ ಏರಿಕೆಯ ಬಿಸಿ ತಟ್ಟಿದೆ.
ಹೊರರಾಜ್ಯದಿಂದ ಬೆಂಗಳೂರಿಗೆ ಟೊಮೆಟೊ ಬಂದಿದೆ. ರಾಜ್ಯದಲ್ಲಿ ಇಳುವರಿ ಕಮ್ಮಿಯಾದ ಕಾರಣ ಪೂರೈಕೆಯಲ್ಲಿ ಕೊರತೆಯಾಗಿದೆ. ಪ್ರತಿ ಎಕರೆಗೆ ಕೇವಲ 30 ರಿಂದ 35 ಟನ್ ಮಾತ್ರ ಇಳುವರಿ ಬರ್ತಿದೆ. 150 ರೂಪಾಯಿ ಟೊಮೆಟೊ ದರ ಏರಿಕೆಯಿಂದ ರೈತರ ಮೊಗದಲ್ಲಿ ಸಂತೋಷ ಮೂಡಿದೆ.