Wednesday, January 22, 2025

ಮೈ ಮೇಲೆ ದೇವರು ಬಂದಿದೆ ಅಂತ ಮಹಿಳೆ ಮೇಲೆ ಹಲ್ಲೆ

ಕೊಪ್ಪಳ : ಮೋಹರಂ ಹಬ್ಬದ ವೇಳೆ ಮೈ ಮೇಲೆ ದೇವರು ಬಂದಿದೆ ಎಂದು ವ್ಯಕ್ತಿಯೊಬ್ಬ ಮಹಿಳೆಯೊಬ್ಬಳಿಗೆ ನವಿಲುಗರಿಯಿಂದ ಅಟ್ಟಾಡಿಸಿ ಹಲ್ಲೆ ಮಾಡಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಕುಷ್ಟಗಿ ತಾಲೂಕಿನ ಹೊಲಗೇರಿ ಗ್ರಾಮದಲ್ಲಿ ನಡೆದಿದೆ. ಮಂಜುನಾಥ ಹಾಬಲಕಟ್ಟಿ ಎಂಬುವವನೇ ಈ ರೀತಿ ಹಲ್ಲೆ ಮಾಡಿರುವ ಆರೋಪಿ. ಈ ಸಂಬಂಧ ಆರೋಪಿ ವಿರುದ್ಧ ಹನುಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಹರಂ ಹಬ್ಬದ ಪ್ರಯುಕ್ತ ಅಲಾಯಿ ಮೆರವಣಿಗೆ ನೋಡಲೆಂದು ನಾಗರತ್ನ ತೆರಳಿದ್ದರು. ಈ ವೇಳೆ ಮಂಜುನಾಥ ಹಾಬಲಕಟ್ಟಿ ಎಂಬ ವ್ಯಕ್ತಿ ಮೈಯಲ್ಲಿ ದೇವರು ಬಂದಿದೆ ಎಂದು ನವಿಲು ಗೆರೆಯಿಂದ ಅಟ್ಟಾಡಿಸಿ ಹೊಡೆದಿದ್ದಾನೆ.

ಇದನ್ನುಓದಿ: ಗೃಹಲಕ್ಷ್ಮಿ ಜಾರಿ: ಆತಂಕ ವ್ಯಕ್ತಪಡಿಸಿದ ಹಣಕಾಸು ಇಲಾಖೆ! ಷರತ್ತುಗಳನ್ನು ವಿಧಿಸುವಂತೆ ಸೂಚನೆ!

ಮೋಹರಂ ಕಮಿಟಿಯ ಬೇಜಾವಾಬ್ದಾರಿಯಿಂದ ಈ ಘಟನೆ ಸಂಭವಿಸಿದೆ. ಆರೋಪಿ ಮಂಜುನಾಥನ ಮೇಲೆ ಹನುಮಸಾಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆ ಘಟನೆ ವೇಳೆ ಹಲ್ಲೆಗೆ ಪ್ರಚೋದನೆ ನೀಡಿದ್ದ ಇನ್ನೋರ್ವ ಆರೋಪಿ ಮಲ್ಲಿಕಾರ್ಜುನಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

RELATED ARTICLES

Related Articles

TRENDING ARTICLES