ಬೆಂಗಳೂರು : ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ತಗ್ಗುಪ್ರದೇಶಗಳಲ್ಲಿ, ಮನೆಯ ಆವರಣದಲ್ಲಿ ಎಲ್ಲೆಂದರಲ್ಲಿ ಹಾವುಗಳ ಹಾವಳಿ ಹೆಚ್ಚಾಗಿದ್ದು, ಶೂ ಸ್ಟಾಂಡ್ ನಲ್ಲಿ ನಾಗರ ಹಾವಿನ ಮರಿಯೊಂದು ಪತ್ತೆಯಾಗಿರುವ ಘಟನೆ ನಗರದ ಹೊರಮಾವು ಪ್ರದೇಶದ ಮನೆಯೊಂದರಲ್ಲಿ ನಡೆದಿದೆ.
ಇದನ್ನೂ ಓದಿ: ಹಳೇ ದ್ವೇಷ: 2 ಕುಟುಂಬಗಳ ನಡುವೆ ಸಿನಿಮೀಯ ಶೈಲಿಯಲ್ಲಿ ಫೈಟ್!
ಇದೀಗ ಮಳೆ ಅಬ್ಬರ ಸ್ವಲ್ಪಮಟ್ಟಿಗೆ ತಗ್ಗಿದೆ ಆದರೆ, ಮಳೆಯ ಅವಾಂತರಗಳು ಮಾತ್ರ ತಪ್ಪಿಲ್ಲ. ಬೆಂಗಳೂರಿನಲ್ಲಿ ಸುರಿದ ಮಳೆಗೆ ಹಾವುಗಳು ಕಬೋಡ್, ಚಪ್ಪಲಿ ಸ್ಟ್ಯಾಂಡ್ ಎನ್ನದೇ ಎಲ್ಲಂದರೆಲ್ಲಿ ಬೆಚ್ಚಗೆ ಮನೆಯೊಳಗೆ ಸೇರಿಕೊಳ್ಳುತ್ತಿವೆ.
ಬೆಂಗಳೂರಿನ ಜಯ್ ಭಾರತ್ ನಗರದಲ್ಲಿ ದೊಡ್ಡ ಗಾತ್ರದ ಹಾವೊಂದು ಕಾಣಿಸಿಕೊಂಡಿತ್ತು, ಇದೀಗ ಹೊರಮಾವಿನಲ್ಲಿ ಚಿಕ್ಕ ಮರಿ ಹೆಡೆ ಎತ್ತಿ ಬುಸುಗುಟ್ಟಿದೆ. ಹಾವುಗಳನ್ನು ಕಂಡು ಗಾಬರಿಗೊಂಡ ಮನೆಯವರು, ಉರಗ ತಜ್ಞರಿಗೆ ಮಾಹಿತಿ ನೀಡಿ ಹಾವುಗಳನ್ನ ರಕ್ಷಣೆ ಮಾಡಿದ್ಧಾರೆ.