Monday, December 23, 2024

181 ರನ್​ಗಳಿಗೆ ಟೀಂ ಇಂಡಿಯಾ ಸರ್ವಪತನ

ಬೆಂಗಳೂರು : ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 181 ರನ್​ಗಳಿಗೆ ಸರ್ವಪತನ ಕಂಡಿದೆ. ಆ ಮೂಲಕ ಭಾರತ ಸಾಧಾರಣ ಟಾರ್ಗೆಟ್ ದಾಖಲಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಹಾರ್ದಿಕ್ ಪಾಂಡ್ಯ ಪಡೆ, 40.5 ಓವರ್​ ಗಳಲ್ಲಿ 181 ರನ್​ಗಳಿಸಿ ಆಲೌಟ್ ಆಯಿತು. ಟೀಂ ಇಂಡಿಯಾ ಪರ ಆರಂಭಿಕ ಬ್ಯಾಟರ್ ಇಶಾನ್ 55 ಹಾಗೂ ಶುಭ್ಮನ್ ಗಿಲ್ 34 ರನ್ ಗಳಿಸಿ ಉತ್ತಮ ಆರಂಭ ನೀಡಿದರು.

ಇವರಿಬ್ಬರೂ ಔಟಾದ ಬಳಿಕ ಮಧ್ಯಮ ಕ್ರಮಾಂಕದ ಬ್ಯಾಟರ್​ಗಳು ರನ್​ಗಳಿಸುವಲ್ಲಿ ವಿಫಲರಾದರು. ಸಂಜು ಸ್ಯಾಮ್ಸನ್ 9, ಹಾರ್ದಿಕ್ ಪಾಂಡ್ಯ 7, ಸೂರ್ಯ ಕುಮಾರ್ ಯಾದವ್ 24, ರವೀಂದ್ರ ಜಡೇಜಾ 10, ಅಕ್ಷರ್ ಪಟೇಲ್ 1, ಶಾರ್ದುಲ್ 16 ರನ್ ಗಳಿಸಿದರು. ವಿಂಡೀಸ್ ಪರ ಶೆಫರ್ಡ್ 3, ಗುಡಾಕೇಶ್ 3 ಹಾಗೂ ಜೋಸೆಫ್ 2 ವಿಕೆಟ್ ಪಡೆದು ಮಿಂಚಿದರು.

RELATED ARTICLES

Related Articles

TRENDING ARTICLES