ಬೆಂಗಳೂರು : ಪ್ರಧಾನಿ ಮೋದಿ ಅವರು ದೆಹಲಿಯಲ್ಲಿ ಅಖಿಲ ಭಾರತ ಶಿಕ್ಷಾ ಸಮಾಗಮ್ ಉದ್ಘಾಟಿಸಿದ ಬಳಿಕ, ಶಾಲೆಗೆ ತೆರಳಿ ಮಕ್ಕಳನ್ನು ಭೇಟಿಯಾಗಿದ್ದಾರೆ.
ಪುಟಾಣಿ ಮಕ್ಕಳ ಶಾಲಾ ಕೊಠಡಿಗೆ ಮೋದಿ ಆಗಮಿಸುತ್ತಿದ್ದಂತೆ ಮಕ್ಕಳು, ನೇರವಾಗಿ ಮೋದಿ ಬಳಿ ಓಡಿ ಹೋಗಿದ್ದಾರೆ. ನಮಸ್ತೆ ಮೋದಿಜಿ ಎಂದು ಸ್ವಾಗತ ಕೋರಿದ್ದಾರೆ. ಇದೇ ವೇಳೆ ಮಕ್ಕಳು ಮೋದಿಯನ್ನು ಅಪ್ಪಿಕೊಂಡು ನಮಸ್ತೆ ಹೇಳಿದ್ದಾರೆ. ಇಷ್ಟೇ ಅಲ್ಲ ಮೋದಿ ಜೊತೆಗಿನ ಮಾತುಕತೆಯೂ ಭಾರಿ ವೈರಲ್ ಆಗಿದೆ.
ಮೋದಿ ಆಗಮಿಸುತ್ತಿದ್ದಂತೆ ಪುಟಾಣಿ ಮಕ್ಕಳು, ನಮಸ್ತೆ ಮೋದಿಜಿ ಎಂದಿದ್ದಾರೆ. ಎಲ್ಲಾ ಮಕ್ಕಳು ಮೋದಿ ಬಳಿ ಹೋಗಿ ಅಪ್ಪಿಕೊಂಡಿದ್ದಾರೆ. ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸಿದ ಪ್ರಧಾನಿ, ನಿಮಗೆ ಮೋದಿ ಗೊತ್ತಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಪ್ರತಿ ಮಕ್ಕಳು ಥಟ್ಟನೆ ಉತ್ತರ ಹೇಳಿದ್ದಾರೆ. ನಾನು ನಿಮ್ಮನ್ನು ಟಿವಿಯಲ್ಲಿ ನೋಡಿದ್ದೇನೆ, ನಾನೂ ನೋಡಿದ್ದೇನೆ ಎಂದು ಪುಟಾಣಿಗಳು ಉತ್ತರಿಸಿದ್ದಾರೆ. ಇಷ್ಟಕ್ಕೆ ಪುಟಾಣಿಗಳ ಪ್ರಶ್ನೆ ಹಾಗೂ ಕುತೂಹಲ ಕಡಿಮೆಯಾಗಿಲ್ಲ.
मासूम बच्चों के साथ आनंद के कुछ पल! इनकी ऊर्जा और उत्साह से मन उमंग से भर जाता है। pic.twitter.com/rGY2mv5eK8
— Narendra Modi (@narendramodi) July 29, 2023
ಯಾವ ಕಲರ್ ಪೈಟಿಂಗ್ ಮಾಡುತ್ತೀದ್ದೀರಿ
ಮಕ್ಕಳ ಬಳಿ ಬಂದ ಮೋದಿ, ಯಾವ ಕಲರ್ ಪೈಟಿಂಗ್ ಮಾಡುತ್ತೀದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇತ್ತ ಮಕ್ಕಳು ಜೋಶ್ ತುಂಬಿದ ಮಾತಿನಲ್ಲಿ , ಮೋದಿಜೀ, ನಾವು ಪೈಟಿಂಗ್ ಮಾಡುತ್ತಿದ್ದೇವೆ. ಇದು ರೆಡ್ ಕಲರ್ ಎಂದಿದ್ದಾರೆ. ಇನ್ನು ಮತ್ತೊಬ್ಬ ಪುಟಾಣಿ ಮೋದಿಜಿ ನೀವು ನಮ್ಮ ಜೊತೆ ಫೋಟೋ ಕ್ಲಿಕ್ಕಿಸುತ್ತೀರಾ ಎಂದು ಪುಟಾಣಿಗಳು ಕೇಳಿದ್ದಾರೆ. ಅರೇ ಫೋಟ, ಸರಿ ಎಂದು ಮಕ್ಕಳೊಂದಿಗೆ ಮೋದಿ ಫೋಟೋಗೆ ಫೋಸ್ ನೀಡಿದ್ದಾರೆ.