Friday, January 3, 2025

ಮಾಸ್ಟರ್ ಆನಂದ್ ಪತ್ನಿ ವಿರುದ್ಧವೇ ನಿಶಾ ಪ್ರತ್ಯಾಸ್ತ್ರ

ಬೆಂಗಳೂರು : ಬಾಲನಟಿ ವನ್ಷಿಕಾ ಹೆಸರು ದುರ್ಬಳಕೆ ಆರೋಪ ಹಿನ್ನೆಲೆಯಲ್ಲಿ ಜೈಲು ಸೇರಿದ್ದ ನಿಶಾ ನರಸಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.

ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಅವರು, ಮಾಸ್ಟರ್​ ಆನಂದ್​​ ಪತ್ನಿ ಯಶಸ್ವಿನಿ ನನ್ನ ಹೆಸರು ಹಾಳು ಮಾಡಲು ಕುತಂತ್ರ ನಡೆಸಿದ್ರು ಎಂದು ಪ್ರತ್ಯಸ್ತ್ರ ಪ್ರಯೋಗಿಸಿದ್ದಾರೆ.

ನಾನು ಯಾರಿಗೂ ಮೋಸ ಮಾಡಿಲ್ಲ. ನನ್ನ ಪ್ರೊಡಕ್ಷನ್​ ಹೆಸರನ್ನು ಹಾಳು ಮಾಡಲು ಕುತಂತ್ರ ಮಾಡಿದ್ದಾರೆ. ನಾನು ಈವೆಂಟ್​​ಗಳನ್ನು ಆರ್ಗನೈಸ್ ಮಾಡುತ್ತಿದ್ದೆ. ನನ್ನನ್ನು ಟ್ರ್ಯಾಪ್ ಮಾಡುವ ಉದ್ದೇಶದಿಂದ ಹೀಗೆ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಯಾಕೆ ಇಷ್ಟು ಸೀನ್ ಕ್ರಿಯೇಟ್?

ಯಶಸ್ವಿನಿ ಫ್ರೀ ಆಗಿ ಯಾವುದೇ ಈವೆಂಟ್​ಗೆ ಬಂದಿಲ್ಲ. ಪೇಮೆಂಟ್ ತಗೊಂಡು ಈವೆಂಟ್​ಗೆ ಬರ್ತಿದ್ಲು. ಪ್ರತಿ ಈವೆಂಟ್​ನಲ್ಲಿ ಫೋಟೋಶೂಟ್ ಮಾಡಿಸಿ ಕೊಳ್ಳುವಗ ಚೆನ್ನಾಗಿಯೇ ಇತ್ತು. ಈಗ ಮಗಳ ಹೆಸರು ಬಂದಿದ್ದಕ್ಕೆ ಇಷ್ಟು ಸೀನ್ ಕ್ರಿಯೇಟ್ ಮಾಡಿದ್ದಾರೆ. ಇವರು ಯಾರು, ಬೇರೆಯವರಿಗೆ ದುಡ್ಡು ವಾಪಸ್ ಕೊಡುಸ್ತೀನಿ ಅನ್ನೋಕೆ? ಎಂದು ಪ್ರಶ್ನೆ ಮಾಡಿದ್ದಾರೆ.

ಮಗಳ ಹೆಸರಲ್ಲಿ ಬ್ಯುಸಿನೆಸ್

ಯಶಸ್ವಿನಿ ಮಗಳಿಂದ ನಮ್ಮ ಕಂಪನಿ ಬೆಳೆದಿದೀಯಾ? ಯಶಸ್ವಿನಿ ಮಗಳನ್ನು ಬಿಟ್ಟು ಬೇರೆಯವರ ಯಾವ ಮಕ್ಕಳನ್ನು ರಿಯಾಲಿಟಿ ಶೋನಲ್ಲಿ ತಗೊಂಡು ಇದ್ದಾರೆ? ಮಗಳ ಹೆಸರಲ್ಲಿ ಯಶಸ್ವಿನಿ ಬ್ಯುಸಿನೆಸ್ ಮಾಡ್ತಿದ್ದಾರೆ. ಎಷ್ಟೋ ಟ್ಯಾಲೆಂಟ್ ಇರೋ ಮಕ್ಕಳಿಗೆ ಯಾಕೆ ಅವಕಾಶ ಕೊಡಲ್ಲ. ನನ್ನ ಆರೋಪ ಯಶಸ್ವಿನಿ ಹಾಗೂ ಹರ್ಷಿತಾ ಮೇಲೆ ಎಂದು ನಿಶಾ ನರಸಪ್ಪ ಗುಡುಗಿದ್ದಾರೆ.

RELATED ARTICLES

Related Articles

TRENDING ARTICLES