ಉತ್ತರ ಕನ್ನಡ : ಮಳೆಗಾಲದಲ್ಲಿ ಪ್ರಕೃತಿ ಹಾಗೂ ಜಲಧಾರೆ ತಾಣಗಳ ಸೊಬಗು ನೊಡೋದೆ ಚೆಂದ. ಆದರೆ, ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಪರಿಣಾಮ ಜಲಪಾತಗಳ ವೀಕ್ಷಣೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ.
ಕಳೆದೊಂದು ವಾರದಿಂದ ನಿರಂತರವಾಗಿ ಸುರಿದ ಭಾರಿ ಮಳೆಯಿಂದ ಸಾಕಷ್ಟು ಅವಾಂತರಗಳು ಸಂಭವಿಸಿವೆ. ಉಡುಪಿ ಜಲಪಾತದಲ್ಲಿ ನಡೆದ ಘಟನೆಯ ಪರಿಣಾಮ ಜಲಪಾತಗಳ ತವರೂರು ಉತ್ತರ ಕನ್ನಡ ಜಿಲ್ಲೆಯಲ್ಲಿ ಜಲಪಾತಗಳ ವಿಕ್ಷಣೆಗೆ ನೀಷೆಧ ಹೇರಲಾಗಿದೆ.
ಇದನ್ನು ಓದಿ : ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ 158.81ಕೋಟಿ ರೂ.ಗಳ ಹೆಚ್ಚುವರಿ ಕಾಮಗಾರಿ ಶೀಘ್ರ: ಸಿಎಂ
5 ವರ್ಷದಲ್ಲಿ 12 ಪ್ರವಾಸಿಗರ ಸಾವು
ಜಲಪಾತಗಳನ್ನು ವಿಕ್ಷಿಸಲು ಬಂದವರು ಸುಮ್ಮನೆ ಇರದೇ, ಆಳ ಅಗಲ ತಿಳಿಯದೆ ಮೋಜು ಮಸ್ತಿ ಮಾಡಲು ಹೋಗಿ ಸಾಕಷ್ಟು ಅವಾಂತರಗಳು ನೆಡೆದಿವೆ. ಈ ಎಲ್ಲ ಘಟನೆಯನ್ನ ಮುಂದಿಟ್ಟು ಈ ಬಾರಿ ಜಿಲ್ಲೆಯ ಪ್ರಸಿದ್ದ ತಾಣವಾಗಿರು ಮಾಗೋಡು, ಸಾತೋಡ್ಡಿ, ಉಂಚಳ್ಳಿ, ಬೆಣ್ಣೆಹೊಳೆ, ಶಿರ್ಲೆ, ಗೋಲಾರಿ, ವಿಭೂತಿ, ಅಪ್ಸರಕೊಂಡ ಸೇರಿ ಅನೇಕ ಜಲಪಾತಗಳ ವೀಕ್ಷಣೆಗೆ ಉತ್ತರ ಕನ್ನಡ ಜಿಲ್ಲಾಡಳಿತ ನಿಷೇಧ ವಿಧಿಸಿದೆ.