Wednesday, January 22, 2025

ಹೆಚ್​ಡಿಕೆ ವಿಪಕ್ಷ ನಾಯಕ ಆಗಲು ಟ್ರೈ ಮಾಡಿದ್ರಾ? : ಪ್ರಿಯಾಂಕ್ ಖರ್ಗೆ

ಬೆಂಗಳೂರು : ಪೆನ್ ಡ್ರೈವ್‌ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ವಿರೋಧ ಪಕ್ಷದ ನಾಯಕ ಆಗಲು ಟ್ರೈ ಮಾಡಿದ್ರಾ? ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ಹೆದರಿಸೋಕೆ ಟ್ರೈ ಮಾಡಿದ್ರಾ? ಬ್ಲಾಕ್ ಮೇಲ್ ಮಾಡಲು ಟ್ರೈ ಮಾಡಿದ್ರಾ?ಪೆನ್ ಡ್ರೈವ್ ನಲ್ಲಿರುವ ಕಂಟೆಂಟ್ ನನಗೆ ಗೊತ್ತಿಲ್ಲ. ಬಿಜೆಪಿಗರು ತಾನೆ ಹೇಳಿದ್ದು, ಪೆನ್ ಡ್ರೈವ್ ನಲ್ಲಿ ಏನೆನೋ ಇದೆ ಅಂತ. ಎಸ್ಪಿ ರೋಡ್ ಗೆ ಹೊದ್ರೆ ಅಂತವು ಸಾವಿರಾರು ಆಗುತ್ತೆ. ಸಾಕ್ಷಿ ಏನಿದೆ ಅಂತ ತೊರಿಸುವುದು ಇಂಪಾರ್ಟೆಂಟ್ ಎಂದು ಕುಟುಕಿದ್ದಾರೆ.

ಅವ್ರ ಹೆಸರು ಇದೆ ಅಂತಾಲ್ವಾ?

ಪಿಎಸ್ಐ ಹಗರಣದ ಸಾಕ್ಷಿ ಕೇಳಿದ್ರು. ಸಾಕ್ಷಿ ತೊರಿಸಿದ್ರೆ, ಪ್ರಿಯಾಂಕ್ ಖರ್ಗೆ ಹುಷಾರಾಗಿರಿ. ತನಿಖೆಯಲ್ಲಿ ನಿಮ್ಮ ಹೆಸರು ಬರುತ್ತೆ ಅಂದ್ರು. ಅವರು ತನಿಖೆಗೆ ಕೊಡಬಹುದಿತ್ತು. ನಾವು ಕೊಟ್ರೆ ರಾಜಕೀಯ ದ್ವೇಷ ಅಂತಿದ್ದಾರೆ. ಏನರ್ಥ, ಪ್ರಕರಣದಲ್ಲಿ ಅವರ ಹೆಸರು ಇದೆ ಅಂತಾಲ್ವಾ? ಪೆನ್ ಡ್ರೈವ್ ಕೊಟ್ರೆ ಅದರ ತನಿಖೆ ಮಾಡಿಸೋಣ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES