Monday, December 23, 2024

ಕಾಂಗ್ರೆಸ್-ಬಿಜೆಪಿ ಇಬ್ರೂ ಅಣ್ಣ-ತಮ್ಮಂದಿರು : ಸಿ.ಎಂ ಇಬ್ರಾಹಿಂ

ಬೆಂಗಳೂರು : ಕಾಂಗ್ರೆಸ್ ಹಾಗೂ ಬಿಜೆಪಿ ಇಬ್ರೂ ಅಣ್ಣ-ತಮ್ಮಂದಿರು. ಬಿಜೆಪಿಗರಿಗೆ ವೋಟ್ ಬ್ಯಾಂಕ್ ಅದೇ ಅಲ್ವಾ? ಮಧ್ಯದಲ್ಲಿ ಶಿಕಾರಿ ನಾವು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಕುಟುಕಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹುಲಿಯನ್ನು ಹಿಡಿಯಲು ಕುರಿ ಕಟ್ಟಬೇಕಲ್ವಾ? ಇಬ್ಬರು ನಮ್ಮನ್ನು ತೋರಿಸಿ ವೋಟು ಮಾಡಿದ್ರು ಎಂದು ಛೇಡಿಸಿದ್ದಾರೆ.

ಭಯೋತ್ಪಾದನೆ ಶುರುವಾಗುತ್ತಿದೆ ಅನ್ನೋದೆ ಇವರಿಗೆ ಲೋಕಸಭಾ ಚುನಾವಣೆಯ ವಿಷಯ. ಮಣಿಪುರದಲ್ಲಿ ಸುಡುತ್ತಿದೆ ಅದರ ಬಗ್ಗೆ ಮಾತನಾಡುತ್ತಿಲ್ಲ. ಮಣಿಪುರದಲ್ಲಿ ಹೆಣ್ಣುಮಕ್ಕಳಿಗೆ ಅತ್ಯಾಚಾರ ಆಗಿದೆ, ಇಲ್ಲಿ ಕ್ಯಾಮೆರಾ ಅಂತಿರಾ. ಹೆಣ್ಣು ಮಕ್ಕಳು ಹುಷಾರಾಗಿರಿ ಅಂತ  ಹೇಳ್ತೀನಿ ಎಂದು ಎಂದು ಚಾಟಿ ಬೀಸಿದ್ದಾರೆ.

ಇದನ್ನೂ ಓದಿ : 500 ಇಲ್ಲ ಅಂದ್ರೆ, 1000 ವರ್ಗಾವಣೆ ಮಾಡಿಕೊಳ್ಳಲಿ : ಹೆಚ್.ಡಿ ರೇವಣ್ಣ

ನಿಮ್ಮದು ಬಿಳಿ ಬಟ್ಟೆ, ಹಳೇ ಪಾರ್ಟಿ

ಕುಮಾರಸ್ವಾಮಿ ಬಿಜೆಪಿ ಪತ್ರದಲ್ಲಿ ಸಹಿ ಬಗ್ಗೆ ಕಾಂಗ್ರೆಸ್ ಟೀಕೆ ವಿಚಾರವಾಗಿ ಮಾತನಾಡಿ, ಪರಸ್ಪರವಾಗಿ ವಿಪಕ್ಷವಾಗಿ ಕೆಲಸ ಮಾಡಿದ್ದಾರೆ. ಬೊಮ್ಮಾಯಿ ಜೆಡಿಎಸ್ ಶಾಸಕಾಂಗ ಆಫೀಸ್‌ಗೆ ಬಂದಿದ್ರು. ನಿಮ್ಮದು ಬಿಳಿ ಬಟ್ಟೆ, ಹಳೇ ಪಾರ್ಟಿ. ಜನತಾದಳ ಮಣ್ಣಿನ ಪಕ್ಷ, ರೈತರ ಪಾರ್ಟಿ ಏನಾದ್ರೂ ಮಾಡಿದ್ರೆ ಹೇಳ್ತಿರಾ? ಮಮತಾ, ನಿತೀಶ್ ಇಬ್ಬರೂ ಬಿಜೆಪಿ ಜೊತೆಗೆ ಹೋಗಿ ಬಂದವರೇ ಎಂದು ಕಾಂಗ್ರೆಸ್​ ವಿರುದ್ಧ ಗುಡುಗಿದ್ದಾರೆ.

ಹೀಗಾದ್ರೆ ಜನ ಬೀದಿಗೆ ಬರ್ತಾರೆ

ಗೃಹಲಕ್ಷ್ಮೀ ಶುರುವಾದ್ರೆ ಅತ್ತೆ-ಸೊಸೆಗೆ ಜಗಳ ಶುರುವಾಗುತ್ತೆ, ಅದನ್ನು ಬೇಗ ಮಾಡಿ. ಸಂಬಳ ಕೊಡೋಕೆ ಆಗುತ್ತೋ ಇಲ್ವೋ? ಕರೆಂಟ್ ಬಿಲ್‌ 200 ಯೂನಿಟ್ ಫ್ರೀ ಅಂತ ಹೇಳಿದ್ರು. ಕರೆಂಟ್ ಬಿಲ್ ಡಬಲ್ ಮಾಡಿದ್ರು. ಹೀಗಾದ್ರೆ ಜನ ಬೀದಿಗೆ ಬರ್ತಾರೆ ಎಂದು ಸಿ.ಎಂ ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES