Saturday, November 2, 2024

150 ಕೋಟಿ ಕಾಮಗಾರಿಗೆ ಕೇಂದ್ರಕ್ಕೆ ಪ್ರಸ್ತಾವನೆ : ಸಿದ್ದಾರಾಮಯ್ಯ

ಬೆಂಗಳೂರು : 150 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹೆಚ್ಚುವರಿ ಕಾಮಗಾರಿಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು-ಮೈಸೂರು ಹೆದ್ದಾರಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿಲ್ಲ ಎಂದರು.

ಕೆಲ ಸೌಲಭ್ಯ ಆಗಬೇಕಿದೆ ಅಷ್ಟೆ. ಈಗಾಗಲೇ ಅಧಿಕಾರಿಗಳಿಗೆ ನಾವು ಸೂಚನೆ ಕೊಟ್ಟಿದ್ದೇವೆ. 150 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹೆಚ್ಚುವರಿ ಕಾಮಗಾರಿಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ನಾನು ಹೋಗಿ ಸಚಿವ ನಿತಿನ್ ಗಡ್ಕರಿ ಅವರ ಜೊತೆ ಮಾತನಾಡುತ್ತೇನೆ ತಿಳಿಸಿದರು.

ನವೆಂಬರ್ ಬಳಿಕ ಹೆಚ್ಚುವರಿ ಕಾಮಗಾರಿ

ಅಪಘಾತಗಳ ತಡೆಗೆ ಹೈವೇ ಪಕ್ಕ ಸ್ಪೀಡ್ ಮೀಟರ್​ ಅಳವಡಿಸಲಾಗಿದೆ. 10 ಕಿ.ಮೀ. ‌ಅಂತರದಲ್ಲಿ ಮೀಟರ್ ಅಳವಡಿಸಿದರೆ ಅನುಕೂಲ ಆಗಲಿದೆ. ಎನ್​ಹೆಚ್​ಎಐ (NHAI) ಅಧಿಕಾರಿಗಳ ಜೊತೆ ನಮ್ಮ ಅಧಿಕಾರಿಗಳು ಸಭೆ ಮಾಡಿದ್ದಾರೆ. ಎಕ್ಸ್​ಪ್ರೆಸ್​​ವೇಯಲ್ಲಿ ವೇಗದ ಮಿತಿ ಇರಲಿಲ್ಲ. ಇದರಿಂದ ಹೆಚ್ಚು ಅಪಘಾತ ಸಂಭವಿಸುತ್ತಿತ್ತು. ಜೂನ್​ನಲ್ಲಿ ಹೆಚ್ಚು ಅಪಘಾತವಾಗಿದ್ದವು. ಜುಲೈನಲ್ಲಿ ಅಪಘಾತ ಪ್ರಮಾಣ ಇಳಿಕೆಯಾಗಿದೆ. ಹೆಚ್ಚುವರಿ ಕಾಮಗಾರಿ ಕೆಲಸ ನವೆಂಬರ್ ಬಳಿಕ ಆರಂಭವಾಗುತ್ತೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES