Wednesday, January 22, 2025

ವಿಶೇಷ ಚೇತನನ ಮೇಲೆ ಖಾಕಿ ದರ್ಪ, ಮೂವರು ಅಮಾನತು

ಬೆಳಗಾವಿ : ವಿಶೇಷ ಚೇತನನ ಮೇಲೆ ದರ್ಪ ಮೆರೆದ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಇದು ಪವರ್ ಟಿವಿ ವರದಿಯ ಫಲಶೃತಿ.

ಪವರ್ ಟಿವಿ ವರದಿಯಿಂದ ಎಚ್ಚೆತ್ತುಕೊಂಡ ಬೆಳಗಾವಿ ಪೊಲೀಸ್ ಆಯುಕ್ತ ಎಸ್.ಎನ್ ಸಿದ್ದರಾಮಪ್ಪ ಮೂವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಉದ್ಯಮಭಾಗ ಪಿಎಸ್​ಐ ಸರ್ದಾರ ಮುತ್ತಟ್ಟಿ, ಪೇದೆಗಳಾದ ಮಲ್ಲಪ್ಪ ಪೂಜಾರಿ, ಎಸ್.ಆರ್ ಮೇತ್ರಿ ಅಮಾನತಾದವರು.

ಕಳೆದ ಮಂಗಳವಾರ ರಾತ್ರಿ ಊಟ ತರಲು ಹೋದ ವಿಶೇಷ ಚೇತನನ ಮೇಲೆ ಪೊಲೀಸರು ದರ್ಪ ಮೆರೆದಿದ್ದರು. ವಿಶೇಷ ಚೇತನ ನಿರಂಜನ ಚೌಗಲೇ ಈ ಕುರಿತು ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಅಮಾನತು ಮಾಡಲಾಗಿದೆ.

RELATED ARTICLES

Related Articles

TRENDING ARTICLES