Sunday, December 22, 2024

ಶನಿ ಮತ್ತು ಚಂದ್ರರ ಸಂಯೋಗದಿಂದ ಯಾವ ಫಲ ಉಂಟಾಗುತ್ತೆ ಗೊತ್ತಾ?

ಬೆಂಗಳೂರು : ಜ್ಯೋತಿಷ್ಯದ ಪ್ರಕಾರ ಶನಿ ಮತ್ತು ಚಂದ್ರ ಎರಡರ ವಿಶೇಷ ಸಂಯೋಗ ಬಹುಫಲಗಳಿಂದ ಕೂಡಿರುತ್ತದೆ ಎಂದು ಹೇಳಲಾಗುವುದು. ಇದು ನಾವುಗಳು ಪ್ರಾಯೋಗಿಕವಾಗಿ ಕಂಡ ಸತ್ಯಗಳೂ ಹೌದು.

ಶನಿ ಮತ್ತು ಚಂದ್ರರ ಸಂಯೋಗದಿಂದ ಯಾವ ಫಲ ಉಂಟಾಗುತ್ತೆ? ಯಾವ ರಾಶಿಯವರಿಗೆ ಹೆಚ್ಚಿನ ಫಲ? ಎಂಬ ಬಗ್ಗೆ ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಪವರ್​ ಟಿವಿಗೆ ಮಾಹಿತಿ ನೀಡಿದ್ದಾರೆ.

ವೃಷಭ, ತುಲಾ, ಮಕರ ಮತ್ತು ಕುಂಭ ಲಗ್ನದವರಿಗೆ ಶನಿಯು ಐಶ್ವರ್ಯಪ್ರದ. ಧನಸ್ಸು ಮತ್ತು ಮೀನ ಲಗ್ನದವರಿಗೆ ಶನಿಯು ಶುಭ್ರಪ್ರದನಾಗಿದ್ದಾನೆ. ಅನ್ಯ ಲಗ್ನದವರಿಗೆ ಮಿಶ್ರಿತ ಫಲಗಳನ್ನು ನೀಡುತ್ತಾನೆ. ಇದು ನಾವುಗಳು ಕಂಡ ಸತ್ಯಗಳು ಎಂದು ಹೇಳಿದ್ದಾರೆ.

ಇದನ್ನೂ ಓದಿ : ಅಮೆರಿಕಾದಲ್ಲಿ 80 ಕೋಟಿ ವೆಚ್ಚದ ಕಾಲಭೈರವೇಶ್ವರ ದೇಗುಲ ನಿರ್ಮಾಣ

ಯಾವ ಭಾವದಲ್ಲಿ ಅಶುಭ ಫಲ

ಜನ್ಮ ಕುಂಡಲಿಯಲ್ಲಿ ಅಥವಾ ಜನ್ಮ ಭಾವದಲ್ಲಿ 3, 6, 10 ಅಥವಾ 11ನೇ ಭಾವದಲ್ಲಿ ಶುಭಫಲಗಳನ್ನು ನೀಡುತ್ತಾನೆ. 1, 2, 5, 7 ಅಥವಾ 9ನೇ ಭಾವದಲ್ಲಿ ಅಶುಭ ಫಲಗಳನ್ನು ಹಾಗೂ 4, 8 ಅಥವಾ 12ನೇ ಭಾವದಲ್ಲಿ ಅರಿಷ್ಟ ಕಾರಕಗಳನ್ನು ನೀಡುತ್ತಾನೆ ಎಂದು ವಿಶ್ಲೇಷಿಸಿದ್ದಾರೆ.

ನಮ್ಮ ಪ್ರಕಾರ ಕುಂಡಲಿಯಲ್ಲಿ ಶನಿಯು ಅಶುಭ ಸ್ಥಾನದಲ್ಲಿ ಸ್ಥಿತನಾಗಿದ್ದಾಗ ಅದರ ದಶೆಯಲ್ಲಿ ಅತ್ಯಂತ ಕೆಟ್ಟ ದುಷ್ಪರಿಣಾಮಗಳನ್ನು ನೀಡುತ್ತಾನೆ. ಆದರೆ, ಭಯಬೇಡ. ಇದಕ್ಕೆ ಸುಲಭವಾದ ಪರಿಹಾರಗಳನ್ನು ತಿಳಿಸಿಕೊಡುತ್ತೇನೆ. ಮುಂದಿನ ಸಂಚಿಕೆಯಲ್ಲಿ ಶನಿ ಮತ್ತು ಚಂದ್ರರ ಸಂಯೋಗದ ವಿಷಯ ತಿಳಿಸುತ್ತೇನೆ ಎಂದು ಶ್ರೀಗಳು ಅಭಯ ನೀಡಿದ್ದಾರೆ.

RELATED ARTICLES

Related Articles

TRENDING ARTICLES